ಬೆಂಗಳೂರು: ಮಹಿಳೆಯರಂತೆ ಪುರುಷರೂ ದಾಂಪತ್ಯ ಜೀವನದಲ್ಲಿ ಅಭದ್ರತೆಯ ಭಯದಿಂದ ನರಳುತ್ತಾರಂತೆ. ಗಂಡನಿಗೆ ಹೀಗೆ ಅನಿಸೋದು ಯಾವಾಗ ಗೊತ್ತಾ?
ಅಧ್ಯಯನವೊಂದರ ಪ್ರಕಾರ ಪುರುಷರು ಎಲ್ಲಾ ವಿಚಾರಗಳಿಗೂ ಪತ್ನಿ ಮೇಲೆ ವಿಪರೀತ ಅವಲಂಬಿಸಿರುವಾಗ ಇಂತಹ ಭಯ ಕಾಡುತ್ತದೆ ಎಂದು ವಿದೇಶೀ ಅಧ್ಯಯನವೊಂದು ಹೇಳಿದೆ. ಅದಲ್ಲದೆ, ಒಂದು ವೇಳೆ ಪತ್ನಿಯ ಆದಾಯ ಪತಿಗಿಂತ ಜಾಸ್ತಿಯಿದ್ದಾಗಲೂ ಪುರುಷರು ಈ ಭಯಕ್ಕೆ ಒಳಗಾಗುತ್ತಾರಂತೆ.
ಪುರುಷರಲ್ಲಿ ಅಭದ್ರತೆ ಕಾಡಲು ಇನ್ನೊಂದು ಕಾರಣವೆಂದರೆ, ಲೈಂಗಿಕವಾಗಿ ಪತ್ನಿಗೆ ತೃಪ್ತಿಪಡಿಸಲು ಸಾಧ್ಯವಾಗದೇ ಇದ್ದಾಗ ಪತ್ನಿ ತನ್ನ ಬಿಟ್ಟು ಹೋದರೆ ಎಂಬ ಭಯ ಒಳಗೊಳಗೇ ಕಾಡುತ್ತದಂತೆ. ಈ ಮೂರು ವಿಚಾರಕ್ಕೆ ಪುರುಷರು ಹೆಚ್ಚಾಗಿ ಅಳುಕುತ್ತಾರೆ ಎಂದು ಅಧ್ಯಯನ ವರದಿ ಹೇಳಿದೆ.