ಬೆಂಗಳೂರು: ಒಂದು ಹೆರಿಗೆಯಾದ ಬಳಿಕ ಸದ್ಯಕ್ಕೆ ಮಗು ಬೇಡವೆಂದಿದ್ದರೆ ಮಹಿಳೆಯರು ಗರ್ಭನಿರೋಧಕ ಗುಳಿಗೆ ಅಥವಾ ಇತರ ಸಾಧನಗಳನ್ನು ಬಳಸುವುದು ಸಹಜ.
ಇಂತಹ ಸಮಯದಲ್ಲಿ ಮಗುವಿಗೆ ಹಾಲುಣಿಸಲು ತೊಂದರೆಯಾಗುತ್ತದೆ ಅಥವಾ ಹಾಲು ಉತ್ಪತ್ತಿಯಾಗುವುದಿಲ್ಲ ಎಂಬಿತ್ಯಾದಿ ಹಲವು ತಪ್ಪು ಕಲ್ಪನೆಗಳು ಹಲವರಲ್ಲಿರುತ್ತದೆ.
ಆದರೆ ಗರ್ಭನಿರೋಧಕ ಬಳಸುವುದರಿಂದ ಮಗುವಿಗೆ ಹಾಲುಣಿಸಲು ಯಾವುದೇ ಸಮಸ್ಯೆಯಿಲ್ಲ. ಇದು ಹಾಲು ಉತ್ಪತ್ತಿ ಮೇಲೆ ಯಾವುದೇ ಪರಿಣಾಮ ಬೀರದು. ಅಥವಾ ಗರ್ಭನಿರೋಧಕ ಗುಳಿಗೆಗಳು ಮಗುವಿನ ಮೇಲೆ ಯಾವುದೇ ಪರಿಣಾಮ ಬೀರದು.