ಬೆಂಗಳೂರು: ಮನೆಯಲ್ಲಿ ಹೆಂಡತಿ ಇಲ್ಲದಿದ್ದರೆ ಪುರುಷರ ಫ್ರೀಡಂಗೆ ಕೊನೆಯೇ ಇಲ್ಲ ಎಂದು ತಮಾಷೆ ಮಾಡುವವರು ಎಷ್ಟೋ ಮಂದಿ ಇದ್ದಾರೆ. ಆದರೆ ಇಲ್ಲೊಂದು ಅಧ್ಯಯನ ಪ್ರಕಾರ ಪುರುಷರಿಗಿಂತ ಹೆಚ್ಚು ಮಹಿಳೆಯರೇ ತಮ್ಮ ಗಂಡಂದಿರ ಅನುಪಸ್ಥಿತಿಯಲ್ಲಿ ಹೆಚ್ಚು ಖುಷಿಯಾಗಿರುತ್ತಾರೆ ಎಂದು ತಿಳಿದುಬಂದಿದೆ.
ಅಮೆರಿಕಾದ ಅಧ್ಯಯನವೊಂದರ ಪ್ರಕಾರ ಮದುವೆಯಾದ ಮಹಿಳೆಯರು ಗಂಡ ಮತ್ತು ಮಕ್ಕಳು ಮನೆಯಲ್ಲಿ ಇಲ್ಲದೇ ಇದ್ದಾಗ ಹೆಚ್ಚು ಖುಷಿಯಾಗಿರುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.
ಗಂಡ, ಮಕ್ಕಳು ಮನೆಯಲ್ಲಿದ್ದಾಗ ಮಹಿಳೆಯರಿಗೆ ವೈಯಕ್ತಿಕ ಕೆಲಸಕ್ಕೆ ಸಮಯವೇ ಇರಲ್ಲ. ಆದರೆ ಯಾರೂ ಇಲ್ಲದೇ ಹೋದಾಗ ತಮ್ಮ ಅಭಿರುಚಿಯ ಕೆಲಸಗಳನ್ನು ಮಾಡಿಕೊಂಡು ಹಾಯಾಗಿರಬಹುದು. ಹಾಗಾಗಿ ಜಂಟಿಯಾದ ಮೇಲೂ ಒಂಟಿಯಾಗಿರುವಾಗ ಮಹಿಳೆಯರು ಹೆಚ್ಚು ಖುಷಿಯಾಗಿರುತ್ತಾರಂತೆ.