Publish Date: Sun, 07 Feb 2021 (09:39 IST)
Updated Date: Sun, 07 Feb 2021 (09:42 IST)
ಬೆಂಗಳೂರು: ಆಸ್ಟ್ರೇಲಿಯಾ ಸರಣಿ ವೇಳೆ ಮೊಣಕೈ ಗಾಯಕ್ಕೊಳಗಾದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಚೇತರಿಕೆಯ ಹಾದಿಯಲ್ಲಿದ್ದಾರೆ.
ಇದೀಗಷ್ಟೇ ಚೇತರಿಸಿಕೊಳ್ಳುತ್ತಿರುವ ಶಮಿ ಬೆಂಗಳೂರಿನ ಎನ್ ಸಿಎನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಗಾಯದ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಅವರು ಗೈರಾಗಿದ್ದಾರೆ. ಒಂದು ವೇಳೆ ಅವರು ಬೇಗನೇ ಚೇತರಿಸಿಕೊಂಡರೆ ಅಂತಿಮ ಎರಡು ಟೆಸ್ಟ್ ಪಂದ್ಯಕ್ಕೆ ತಂಡಕ್ಕೆ ವಾಪಸಾತಿ ಆದರೂ ಅಚ್ಚರಿಯಿಲ್ಲ.