Publish Date: Sun, 07 Feb 2021 (09:19 IST)
Updated Date: Sun, 07 Feb 2021 (09:20 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಎರಡು ಓವರ್ ಬೌಲಿಂಗ್ ಮಾಡಿದ ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ರನ್ನು ಅನುಕರಿಸಿ ಗಮನ ಸೆಳೆದಿದ್ದಾರೆ.
ಎರಡನೇ ದಿನದಾಟದಲ್ಲಿ ಟೀ ವಿರಾಮದ ಮೊದಲು ನಾಯಕ ವಿರಾಟ್, ರೋಹಿತ್ ಶರ್ಮಾಗೆ ಎರಡು ಓವರ್ ಬೌಲಿಂಗ್ ಮಾಡಲು ಅವಕಾಶ ಕೊಟ್ಟರು. ಈ ವೇಳೆ ರೋಹಿತ್ ಎರಡನೇ ಓವರ್ ನ ಕೊನೆಯ ಎಸೆತವನ್ನು ಪಕ್ಕಾ ಭಜಿ ಶೈಲಿಯಲ್ಲಿ ಬೌಲಿಂಗ್ ಮಾಡಿ ಸಹ ಆಟಗಾರರ ಮೊಗದಲ್ಲಿ ನಗು ಮೂಡಿಸಿದರು.