Publish Date: Sat, 06 Feb 2021 (14:59 IST)
Updated Date: Sat, 06 Feb 2021 (15:00 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ದ್ವಿಶತಕ ಸಿಡಿಸಿ ಮುನ್ನುಗ್ಗುತ್ತಿದ್ದು, ಅವರ ವಿಕೆಟ್ ಕೀಳಲಾಗದೇ ಭಾರತೀಯ ಬೌಲರ್ ಗಳು ಸುಸ್ತಾಗಿದ್ದಾರೆ.
ಇಂಗ್ಲೆಂಡ್ ಇತ್ತೀಚೆಗಿನ ವರದಿ ಬಂದಾಗ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 474 ರನ್ ಗಳಿಸಿದೆ. ಇಂದು ಇಡೀ ದಿನದಲ್ಲಿ ಭಾರತಕ್ಕೆ ದಕ್ಕಿದ್ದು ಕೇವಲ 2 ವಿಕೆಟ್! ಆ ಬೆನ್ ಸ್ಟೋಕ್ 82 ರನ್ ಗಳಿಸಿ ನದೀಂಗೆ ವಿಕೆಟ್ ಒಪ್ಪಿಸಿದರೆ ಈಗಷ್ಟೇ 34 ರನ್ ಗಳಿಸಿದ್ದ ಒಲೀ ಪೋಪ್ ರವಿಚಂದ್ರನ್ ಅಶ್ವಿನ್ ಎಲ್ ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ ಇನ್ನೊಂದೆಡೆ ಗಟ್ಟಿಯಾಗಿ ಬೇರೂರಿರುವ ರೂಟ್ 217 ರನ್ ಗಳಿಸಿ ಆಡುತ್ತಿದ್ದು ಭಾರತೀಯರಿಗೆ ತಲೆನೋವಾಗಿದ್ದಾರೆ.