Publish Date: Sun, 07 Feb 2021 (09:35 IST)
Updated Date: Sun, 07 Feb 2021 (09:36 IST)
ಮುಂಬೈ: ರೈತರ ಹೋರಾಟದಲ್ಲಿ ವಿದೇಶೀಯರ ಟ್ವೀಟ್ ಬಗ್ಗೆ ಖಡಕ್ ಕಾಮೆಂಟ್ ಮಾಡಿ ವಿವಾದಕ್ಕೆ ಸಿಲುಕಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಬಗ್ಗೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾತನಾಡಿದ್ದಾರೆ.
ಸಚಿನ್ ಮತ್ತು ಇತರ ಸೆಲೆಬ್ರಿಟಿಗಳು ಮಾಡಿದ ಕಾಮೆಂಟ್ ಬಗ್ಗೆ ಸಾಮಾನ್ಯ ಜನರೂ ಪ್ರತಿಕ್ರಿಯಿಸುತ್ತಿದ್ದಾರೆ. ಇಂತಹ ಸೆಲೆಬ್ರಿಟಿಗಳು ತಮ್ಮದಲ್ಲದ ಕ್ಷೇತ್ರದ ಬಗ್ಗೆ ಪ್ರತಿಕ್ರಿಯಿಸುವಾಗ ಎಚ್ಚರಿಕೆಯಿಂದ ಪ್ರತಿಕ್ರಿಯಿಸಬೇಕು ಎಂದು ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.