Publish Date: Sun, 07 Feb 2021 (09:11 IST)
Updated Date: Sun, 07 Feb 2021 (09:13 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್ ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿನಂದನೆ ತಿಳಿಸಿದ್ದಾರೆ.
ಇದು ಜೋ ರೂಟ್ 100 ನೇ ಟೆಸ್ಟ್ ಪಂದ್ಯ. ಈ ಸ್ಮರಣೀಯ ಪಂದ್ಯದಲ್ಲಿ ದಾಖಲೆಯ ದ್ವಿಶತಕ ಸಿಡಿಸಿದ ಅವರು ಕೊನೆಗೂ ಔಟಾದಾಗ ಹತ್ತಿರ ಹೋದ ವಿರಾಟ್ ಖುದ್ದಾಗಿ ಬೆನ್ನುತಟ್ಟಿ ಮ್ಯಾರಥಾನ್ ಇನಿಂಗ್ಸ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಮೊದಲ ದಿನದಾಟದಲ್ಲೂ ರೂಟ್ ಸ್ನಾಯುಸೆಳೆತಕ್ಕೊಳಗಾದಾಗ ವಿರಾಟ್ ಬಳಿ ಹೋಗಿ ಅವರಿಗೆ ಸಹಾಯ ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದು.