Publish Date: Sat, 28 Nov 2020 (09:34 IST)
Updated Date: Sat, 28 Nov 2020 (09:36 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಭಾರೀ ಮೊತ್ತ ಚೇಸ್ ಮಾಡುವಲ್ಲಿ ಎಡವಿದ ಟೀಂ ಇಂಡಿಯಾಕ್ಕೆ ಮತ್ತೆ ರೋಹಿತ್ ಶರ್ಮಾರನ್ನು ಕರೆಸಿಕೊಳ್ಳಲು ನೆಟ್ಟಿಗರು ಕರೆ ನೀಡಿದ್ದಾರೆ.
ಗಾಯದ ಕಾರಣ ನೀಡಿ ರೋಹಿತ್ ರನ್ನು ಆಸ್ಟ್ರೇಲಿಯಾ ಸರಣಿಯಿಂದ ಹೊರಗಿಡಲಾಗಿದೆ. ಆದರೆ ರೋಹಿತ್ ಇಲ್ಲದ ಟೀಂ ಇಂಡಿಯಾ ಬ್ಯಾಟಿಂಗ್ ತೀರಾ ಕಳಪೆಯಾಗಿದೆ. ಹೀಗಾಗಿ ಮತ್ತೆ ರೋಹಿತ್ ರನ್ನು ಕರೆಸಿ ಎಂದು ಹಲವರು ಆಗ್ರಹಿಸಿದರೆ ಮತ್ತೆ ಕೆಲವರು ರೋಹಿತ್ ಇಲ್ಲದೇ ಆಸ್ಟ್ರೇಲಿಯನ್ನರ ಶಾರ್ಟ್ ಬಾಲ್ ಗಳಿಗೆ ಉತ್ತರಿಸುವವರೇ ಇಲ್ಲವಾಗಿದ್ದಾರೆ ಎಂದು ಅಳಲು ತೋರಿಕೊಂಡಿದ್ದಾರೆ.