ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಗೆ ಭಾರತದ ವಿರುದ್ಧ ಆಡುವುದು ಎಂದರೆ ಅದೇನೋ ಖುಷಿ. ಇದೇ ಕಾರಣಕ್ಕೆ ಅವರಿಗೆ ಭಾರತದ ಪೌರತ್ವ ನೀಡಿ ಎಂದು ಕಾಮೆಂಟೇಟರ್ ಆಕಾಶ್ ಚೋಪ್ರಾ ಆಗ್ರಹಿಸಿದ್ದಾರೆ.
ಐಪಿಎಲ್ ನಲ್ಲಿ ಕಳಪೆ ಫಾರ್ಮ್ ಪ್ರದರ್ಶಿಸಿದ್ದ ಸ್ಮಿತ್ ಈಗ ಭಾರತದ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ಸ್ಮಿತ್ ಭಾರತ ತಂಡಕ್ಕೆ ಕಂಟಕವಾಗಿದ್ದಾರೆ. ಹೀಗಾಗಿ ಚೋಪ್ರಾ ಈ ರೀತಿ ತಮಾಷೆಯಾಗಿ ಮನವಿ ಮಾಡಿದ್ದಾರೆ. ಸ್ಮಿತ್ ಗೆ ಭಾರತವೆಂದರೆ ವಿಶೇಷ ಪ್ರೀತಿ. ಹೀಗಾಗಿ ಭಾರತ ಪೌರತ್ವ ನೀಡಿ, ಆಧಾರ್ ಕಾರ್ಡ್ ಮಾಡಿಸಿಕೊಡಿ ಎಂದು ತಮಾಷೆ ಮಾಡಿದ್ದಾರೆ.