Publish Date: Sat, 28 Nov 2020 (09:05 IST)
Updated Date: Sat, 28 Nov 2020 (09:07 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಆಟವಾಡಿದ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಿನೂತನ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಅತೀ ವೇಗದ 1000 ರನ್ ಪೂರೈಸಿದ ಭಾರತೀಯ ಎಂಬ ದಾಖಲೆಯನ್ನು ಹಾರ್ದಿಕ್ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು 857 ಎಸೆತಗಳಿಂದ ಪಾಂಡ್ಯ ಈ ದಾಖಲೆ ಮಾಡಿದ್ದಾರೆ. ಜಾಗತಿಕವಾಗಿ ವೆಸ್ಟ್ ಇಂಡೀಸ್ ನ ಆಂಡ್ರೆ ರಸೆಲ್ 787 ಎಸೆತಗಳಿಂದ ಈ ದಾಖಲೆ ಮಾಡಿ ನಂ.1 ಸ್ಥಾನದಲ್ಲಿದ್ದಾರೆ.