Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತ-ಆಸ್ಟ್ರೇಲಿಯಾ ಏಕದಿನ: ಬಿಗ್ ಥ್ರೀ ವೈಫಲ್ಯದಿಂದ ಹೀನಾಯವಾಗಿ ಸೋತ ಟೀಂ ಇಂಡಿಯಾ

ಭಾರತ-ಆಸ್ಟ್ರೇಲಿಯಾ ಏಕದಿನ: ಬಿಗ್ ಥ್ರೀ ವೈಫಲ್ಯದಿಂದ ಹೀನಾಯವಾಗಿ ಸೋತ ಟೀಂ ಇಂಡಿಯಾ
ಸಿಡ್ನಿ , ಶುಕ್ರವಾರ, 27 ನವೆಂಬರ್ 2020 (17:22 IST)
ಸಿಡ್ನಿ: ತಿಂಗಳುಗಳ ಬಳಿಕ ಕಣಕ್ಕಿಳಿದು ಆಸ್ಟ್ರೇಲಿಯಾವನ್ನೇ ಗೆದ್ದೇ ಬಿಡುತ್ತೇವೆ ಎಂದು ಬೀಗುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಮೊದಲ ಏಕದಿನ ಪಂದ್ಯದಲ್ಲೇ ಮುಖಭಂಗವಾಗಿದೆ.


ಮೊದಲ ಏಕದಿನ ಪಂದ್ಯವನ್ನು ಅತಿಥೇಯ ಆಸೀಸ್ 67 ರನ್ ಗಳಿಂದ ಗೆದ್ದು ಶುಭಾರಂಭ ಮಾಡಿದೆ. ಆರಂಭಿಕ ಶಿಖರ್ ಧವನ್ ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ಒದಗಿಸಿದರೂ ಮಯಾಂಕ್ 22 ರನ್ ಗೆ ವಿಕೆಟ್ ಒಪ್ಪಿಸಿದರು. ಅತ್ತ ಶಿಖರ್ ಧವನ್ ಕೊಂಚ ನಿಧಾನಗತಿಯ ಆಟವಾಡುತ್ತಿದ್ದರೂ ತಕ್ಕ ಸಾಥಿಯ ಪಾತ್ರ ಮಾಡುತ್ತಿದ್ದರು. ಆದರೆ ಅವರೂ 74 ರನ್ ಗೆ ವಿಕೆಟ್ ಒಪ್ಪಿಸಿದಾಗ ಭಾರತ ಸೋಲಿನತ್ತ ಮುಖಮಾಡಿತು. ರನ್ ಚೇಸಿಂಗ್ ವೀರ ವಿರಾಟ್ ಕೊಹ್ಲಿ ಕೇವಲ 21, ಹೊಡೆಬಡಿಯ ಆಟವಾಡುವ ಶ್ರೇಯಸ್ ಐಯರ್ ಕೇವಲ 2 ಮತ್ತು ಕೆಳ ಕ್ರಮಾಂಕದಲ್ಲಿ ಆಧಾರವಾಗಬೇಕಿದ್ದ ಕೆಎಲ್ ರಾಹುಲ್ 12 ರನ್ ಗೆ ವಿಕೆಟ್ ಒಪ್ಪಿಸಿದರು. ಈ ಮೂವರ ವೈಫಲ್ಯದಿಂದಾಗಿ ಭಾರತಕ್ಕೆ ಸೋಲಾಯಿತು. ಆದರೆ ಇದ್ದವರಲ್ಲಿ ಭರವಸೆ ಮೂಡಿಸಿದ್ದು ಹಾರ್ದಿಕ್ ಪಾಂಡ್ಯ.

ಹೊಡೆಬಡಿಯ ಆಟವಾಡಿದ ಹಾರ್ದಿಕ್ ಗೆ ತಕ್ಕ ಸಾಥ್ ಸಿಕ್ಕಿದ್ದರೆ ಕತೆಯೇ ಬೇರೆಯಾಗುತ್ತಿತ್ತು. ಅಂತಿಮವಾಗಿ ಅವರು 76 ಎಸೆತಗಳಲ್ಲಿ 90 ರನ್ ಗಳಿಸಿ ಔಟಾದರು. ಭಾರತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಲಷ್ಟೇ ಶಕ್ತವಾಯಿತು. ಆಸೀಸ್ ಪರ ಆಡಂ ಝಂಪಾ 4, ಜೋಶ್ ಹೇಝಲ್ ವುಡ್ 3 ವಿಕೆಟ್ ಕಬಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಪಾಟೆ ಪಿಚ್ ನಲ್ಲಿ ಟೀಂ ಇಂಡಿಯಾ ಬೌಲರ್ ಗಳ ಚೆಂಡಾಡಿದ ಆಸೀಸ್ ಬ್ಯಾಟ್ಸ್ ಮನ್ ಗಳು