Publish Date: Sat, 28 Nov 2020 (09:48 IST)
Updated Date: Sat, 28 Nov 2020 (09:50 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳಿಗೆ ಈಗ ಕಾಡುತ್ತಿರುವ ಒಂದೇ ಒಂದು ಪ್ರಶ್ನೆಯೆಂದರೆ ರೋಹಿತ್ ಶರ್ಮಾರನ್ನು ಯಾಕೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಕಳುಹಿಸಿಲ್ಲ? ನಿಜವಾಗಿಯೂ ಅವರ ಗಾಯ ಗಂಭೀರವೇ? ಇದಕ್ಕೀಗ ಬಿಸಿಸಿಐ ಸ್ಪಷ್ಟನೆ ನೀಡಲು ಪ್ರಯತ್ನಿಸಿದೆ.
ಐಪಿಎಲ್ ಮುಗಿದ ಮೇಲೆ ತಂದೆಯ ಅನಾರೋಗ್ಯ ಕಾರಣದಿಂದ ತಂಡದ ಜತೆಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸದೇ ಭಾರತಕ್ಕೆ ಬಂದರು. ಸದ್ಯಕ್ಕೆ ಅವರು ಎನ್ ಸಿಎನಲ್ಲಿ ತರಬೇತಿ ಪಡೆಯುತ್ತಿದ್ದು, ಅವರು ಆಡುವಷ್ಟು ಸುಧಾರಿಸಿಕೊಂಡಿಲ್ಲ ಎಂದು ಎನ್ ಸಿಎ ಅಧಿಕಾರಿಗಳು ಹೇಳಿದ್ದಾರೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದ್ದಾರೆ. ಹೀಗೇ ಆದರೆ ಅವರು ಉಳಿದ ಟೆಸ್ಟ್ ಪಂದ್ಯದ ವೇಳೆಗೂ ಆಸ್ಟ್ರೇಲಿಯಾಗೆ ತೆರಳುವುದು ಅನುಮಾನವೇ.