Publish Date: Thu, 12 Dec 2019 (17:11 IST)
Updated Date: Thu, 12 Dec 2019 (17:12 IST)
ಬೆಂಗಳೂರು: ತಮಿಳುನಾಡು ವಿರುದ್ಧ ನಡೆದ ಮೊದಲ ರಣಜಿ ಪಂದ್ಯವನ್ನು ಕರ್ನಾಟಕ ರೋಚಕವಾಗಿ ಅಂತಿಮ ದಿನದ ಅಂತಿಮ ಓವರ್ ನಲ್ಲಿ 26 ರನ್ ಗಳಿಂದ ಗೆದ್ದುಕೊಂಡಿದೆ.
ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 336 ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ 151 ಕ್ಕೆ ಆಲೌಟ್ ಆಗಿತ್ತು. ತಮಿಳುನಾಡು ಮೊದಲ ಇನಿಂಗ್ಸ್ ನಲ್ಲಿ 307 ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ 154 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಕರ್ನಾಟಕ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಕೃಷ್ಣಪ್ಪ ಗೌತಮ್ 8 ವಿಕೆಟ್ ಕಬಳಿಸಿದರು.