ಮುಂಬೈ: ಅಮ್ಮ ಎಂದರೆ ದೇವರಿಗೆ ಸಮ. ಕಣ್ಣೆದುರು ಕಾಣು ಆ ದೇವತೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ್ದು ಮಕ್ಕಳ ಕರ್ತವ್ಯ. ಚಂಡೀಘಡ ತಂಡದ ವೇಗದ ಬೌಲರ್ ಶ್ರೇಷ್ಠ ನಿರ್ಮೋಹಿ ಅದನ್ನೇ ಮಾಡಿದ್ದಾರೆ.
ಅರುಣಾಚಲ ಪ್ರದೇಶದ ವಿರುದ್ಧ ಹಗಲು ಹೊತ್ತಿನಲ್ಲಿ ರಣಜಿ ಆಡುವ ಆಟಗಾರ ರಾತ್ರಿ ಎಲ್ಲಾ ಕ್ರಿಕೆಟಿಗರಂತೇ ವಿಶ್ರಾಂತಿ ತೆಗೆದುಕೊಳ್ಳದೇ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ನಿರ್ಮೋಹಿ ಅಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದರ ನಡುವೆಯೇ ಅರುಣಾಚಲ ಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ಸಾಧನೆ ಮಾಡಿದ್ದಾರೆ. ಹಗಲು ಹೊತ್ತು ತಂದೆ ಅಮ್ಮನನ್ನು ನೋಡಿಕೊಳ್ಳುತ್ತಾರೆ. ಆದರೆ ರಾತ್ರಿ ಹೊತ್ತು ನೋಡಿಕೊಳ್ಳಲು ಯಾರೂ ಇಲ್ಲ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದೇನೆ ಎಂದು ನಿರ್ಮೋಹಿ ಹೇಳಿಕೊಂಡಿದ್ದಾರೆ.