Publish Date: Wed, 11 Dec 2019 (15:56 IST)
Updated Date: Wed, 11 Dec 2019 (15:58 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಕರ್ನಾಟಕ ಮೂಲದ ಮಯಾಂಕ್ ಅಗರ್ವಾಲ್ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ.
ಗಾಯಗೊಂಡ ಶಿಖರ್ ಧವನ್ ಸ್ಥಾನಕ್ಕೆ ಮಯಾಂಕ್ ರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ಆರಂಭಿಕರಾಗಿ ಭರ್ಜರಿ ರನ್ ಗಳಿಸಿದ್ದ ಮಯಾಂಕ್ ಸದ್ಯದಲ್ಲೇ ಸೀಮಿತ ಓವರ್ ಗಳ ಪಂದ್ಯಕ್ಕೆ ಆಯ್ಕೆಯಾಗಬಹುದು ಎಂಬ ನಿರೀಕ್ಷೆಯಿತ್ತು.
ಅದೀಗ ನಿಜವಾಗಿದೆ. ಇದರೊಂದಿಗೆ ಮಯಾಂಕ್ ಪೂರ್ಣ ಪ್ರಮಾಣದಲ್ಲಿ ಟೀಂ ಇಂಡಿಯಾ ಪ್ರತಿನಿಧಿಸುವ ಅವಕಾಶ ಸಿಕ್ಕಿದೆ. ಆದರೆ ಆಡುವ ಬಳಗದಲ್ಲಿ ಅವರಿಗೆ ಅವಕಾಶ ಸಿಗುವುದು ಕಷ್ಟವೇ. ಹಾಗಿದ್ದರೂ ಸೀಮಿತ ಪಂದ್ಯಗಳಿಗೆ ಮಯಾಂಕ್ ಗೆ ಇದು ಅವಕಾಶದ ಬಾಗಿಲು ತೆರೆದಂತೆ.