Publish Date: Wed, 11 Dec 2019 (10:29 IST)
Updated Date: Wed, 11 Dec 2019 (10:31 IST)
ಮುಂಬೈ: ಆರಂಭಿಕ ಶಿಖರ್ ಧವವ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಹೊರನಡೆಯಲಿರುವುದು ಬಹುತೇಕ ಖಚಿತವಾಗಿದೆ.ಹೀಗಾಗಿ ಧವನ್ ಸ‍್ಥಾನಕ್ಕೆ ಏಕದಿನ ತಂಡಕ್ಕೆ ಮಯಾಂಕ್ ಅಗರ್ವಾಲ್ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈಗಾಗಲೇ ಮಯಾಂಕ್ ಟೆಸ್ಟ್ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಸೀಮಿತ ಓವರ್ ಗಳ ಪಂದ್ಯದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈಗ ಧವನ್ ಗಾಯಗೊಂಡಿರುವುದರಿಂದ ಅವರ ಸ್ಥಾನಕ್ಕೆ ಮಯಾಂಕ್ ಗೆ ಅದೃಷ್ಟ ಒಲಿಯುವ ಲಕ್ಷಣ ಕಾಣುತ್ತಿದೆ.
ಆಯ್ಕೆ ಸಮಿತಿ ಈಗಾಗಲೇ ಧವನ್ ಸ‍್ಥಾನಕ್ಕೆ ಮಯಾಂಕ್ ಹೆಸರು ಶಿಫಾರಸ್ಸು ಮಾಡಿದೆ ಎನ್ನಲಾಗಿದ್ದು, ಒಂದು ವೇಳೆ ಇದು ಖಚಿತವಾದರೆ ಕರ್ನಾಟಕ ಪರ ರಣಜಿ ಆಡುತ್ತಿರುವ ಮಯಾಂಕ್ ಶೀಘ್ರವೇ ಟೀಂ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ. ಡಿಸೆಂಬರ್ 15 ರಿಂದ ಏಕದಿನ ಸರಣಿ ಆರಂಭವಾಗಲಿದೆ.