Publish Date: Mon, 05 Jul 2021 (12:14 IST)
Updated Date: Mon, 05 Jul 2021 (10:46 IST)
ಮುಂಬೈ: ಟೀಂ ಇಂಡಿಯಾಗೆ ಶಾಶ್ವತವಾಗಿ ರಾಹುಲ್ ದ್ರಾವಿಡ್ ಕೋಚ್ ಆಗಬೇಕೇ? ಈ ಕುರಿತು ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದೇನು ಗೊತ್ತಾ?
ಟೀಂ ಇಂಡಿಯಾಗೆ ಮುಖ್ಯ ಕೋಚ್ ಆಗಿರುವ ರವಿಶಾಸ್ತ್ರಿ ಅವಧಿ ಇನ್ನೇನು ಮುಗಿಯುತ್ತದೆ. ಈಗ ಲಂಕಾ ಸರಣಿಗೆ ತಾತ್ಕಾಲಿಕವಾಗಿ ರಾಹುಲ್ ದ್ರಾವಿಡ್ ಗೆ ಕೋಚ್ ಹುದ್ದೆ ನೀಡಲಾಗಿದೆ. ಮುಂದೆ ದ್ರಾವಿಡ್ ರನ್ನೇ ಶಾಶ್ವತವಾಗಿ ಕೋಚ್ ಆಗಿ ನೇಮಿಸಬೇಕು ಎಂಬ ಮಾತು ಕೇಳಿಬರುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಪಿಲ್ ದೇವ್ ಲಂಕಾ ಸರಣಿ ಮುಗಿಯುವವರೆಗೂ ಈ ಬಗ್ಗೆ ಚರ್ಚೆ ಬೇಡ. ಹೊಸ ಕೋಚ್ ಗೆ ಹುಡುಕಾಟ ನಡೆಸುವುದು ತಪ್ಪಲ್ಲ. ಒಂದು ವೇಳೆ ರವಿಶಾಸ್ತ್ರಿ ಒಳ್ಳೆಯ ಕೆಲಸ ಮಾಡಿದರೆ ಅವರನ್ನು ಮುಂದುವರಿಸುವುದರಲ್ಲಿ ತಪ್ಪಿಲ್ಲ. ಇದಕ್ಕೆಲ್ಲಾ ಕಾಲವೇ ಉತ್ತರ ಕೊಡಬೇಕು. ಅಲ್ಲಿಯವರೆಗೆ ಕೋಚ್, ಆಟಗಾರರ ಮೇಲೆ ಇಲ್ಲದ ಒತ್ತಡ ಹಾಕುವುದು ಬೇಡ ಎಂದಿದ್ದಾರೆ.