Publish Date: Tue, 29 Jun 2021 (08:23 IST)
Updated Date: Tue, 29 Jun 2021 (09:29 IST)
ಮುಂಬೈ: ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾಕ್ಕೆ ಕೋಚ್ ಆಗಲಿರುವ ರಾಹುಲ್ ದ್ರಾವಿಡ್ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.
ದ್ರಾವಿಡ್ ಮತ್ತೆ ಟೀಂ ಇಂಡಿಯಾ ಜೆರ್ಸಿ ತೊಟ್ಟಿರುವುದು ನೋಡಿ ಎಲ್ಲರಿಗೂ ಖುಷಿಯಾಗಿದೆ. ಇನ್ನು, ದ್ರಾವಿಡ್ ಇದ್ದರೆ ಗೆಲುವು ನಿಶ್ಚಿತ ಎಂದು ನೆಟ್ಟಿಗರು ಭವಿಷ್ಯ ನುಡಿದಿದ್ದಾರೆ.
ಆದರೆ ದ್ರಾವಿಡ್ ಪ್ರವಾಸಕ್ಕೆ ಮುನ್ನ ಮಾಧ‍್ಯಮಗೋಷ್ಠಿಯಲ್ಲಿ ಮಾತನಾಡುವಾಗ ಎಷ್ಟೇ ಯಶಸ್ಸು ಸಿಕ್ಕಿದರೂ ತಾವೊಬ್ಬ ವಿನಯವಂತ ಎಂದು ಸಾಬೀತುಪಡಿಸಿದ್ದಾರೆ. ಎ, ಅಂಡರ್ 19 ತಂಡದ ಕೋಚ್ ಆಗಿ ದ್ರಾವಿಡ್ ಅನೇಕ ಪ್ರತಿಭಾವಂತರನ್ನು ಟೀಂ ಇಂಡಿಯಾಕ್ಕೆ ನೀಡಿದ್ದಾರೆ. ಹಾಗಿದ್ದರೂ ದ್ರಾವಿಡ್ ಲಂಕಾ ಪ್ರವಾಸ ನನಗೂ ಕೋಚ್ ಆಗಿ ಹೊಸ ಅನುಭವ. ಇಲ್ಲಿ ಅನುಭವಿಗಳ ಜೊತೆ ಯುವಕರಿದ್ದಾರೆ. ಹೀಗಾಗಿ ನನಗೂ ಕೋಚ್ ಆಗಿ, ಕ್ರಿಕೆಟಿಗನಾಗಿ ಕಲಿಯಲು ಹೊಸ ವಿಷಯಗಳಿವೆ. ನಾನೂ ಸಾಕಷ್ಟು ತಿಳಿಯಬಹುದು ಎಂದು ವಿಧೇಯರಾಗಿ ಹೇಳಿದ್ದಾರೆ.