Publish Date: Fri, 02 Jul 2021 (11:02 IST)
Updated Date: Fri, 02 Jul 2021 (10:21 IST)
ಮುಂಬೈ: ಶ್ರೀಲಂಕಾ ವಿರುದ್ಧದ ಸೀಮಿತ ಓವರ್ ಗಳ ಸರಣಿಗೆ ಟೀಂ ಇಂಡಿಯಾಗೆ ತಾತ್ಕಾಲಿಕವಾಗಿ ಮುಖ್ಯ ಕೋಚ್ ಆಗಿರುವ ವಾಲ್ ರಾಹುಲ್ ದ್ರಾವಿಡ್ ಮುಂದೊಂದು ದಿನ ಪರ್ಮನೆಂಟ್ ಕೋಚ್ ಆಗುವುದು ಪಕ್ಕಾ.
ಹೀಗಂತ ಮಾಜಿ ಕ್ರಿಕೆಟಿಗ ರಿತೇಂದರ್ ಸಿಂಗ್ ಸೋಧಿ ಅಭಿಪ್ರಾಯಪಟ್ಟಿದ್ದಾರೆ. ರವಿಶಾಸ್ತ್ರಿ ಅನುಪಸ್ಥಿತಿಯಲ್ಲಿ ದ್ರಾವಿಡ್ ಸದ್ಯಕ್ಕೆ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿದ್ದರೂ ಅವರು ತಾತ್ಕಾಲಿಕವಾಗಿ ನೇಮಕವಾಗಿರಲ್ಲ. ಮುಂದಿನ ಬಾರಿಯ ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ಅವರು ಮುಂಚೂಣಿಯಲ್ಲಿರುತ್ತಾರೆ ಎಂದಿದ್ದಾರೆ.
ರವಿಶಾಸ್ತ್ರಿ ಇದುವರೆಗೆ ಉತ್ತಮ ಕೆಲಸ ಮಾಡಿರಬಹುದು. ಆದರೆ ಅವರ ಅವಧಿ ಮುಗಿಯುತ್ತಿದೆ. ಹೀಗಾಗಿ ದ್ರಾವಿಡ್ ರಂತಹ ಆಟಗಾರರನ್ನು ತಾತ್ಕಾಲಿಕವಾಗಿ ಕೋಚ್ ಆಗಿ ನೇಮಿಸಲು ಸಾಧ‍್ಯವೇ ಇಲ್ಲ. ಇದು ಮುಂದಿನ ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ ಎನ್ನುವುದಕ್ಕೆ ಸುಳಿವು ಎಂದು ಸೋಧಿ ಹೇಳಿದ್ದಾರೆ.