Publish Date: Mon, 28 Jun 2021 (10:54 IST)
Updated Date: Mon, 28 Jun 2021 (09:35 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ರನ್ನು ನೋಡಬೇಕೆಂದು ಎಷ್ಟೋ ಅಭಿಮಾನಿಗಳ ಬಯಕೆಯಾಗಿತ್ತು. ಅದೀಗ ಶ್ರೀಲಂಕಾ ಪ್ರವಾಸ ಮಾಡಲಿರುವ ಟೀಂ ಇಂಡಿಯಾ ಸರಣಿ ಮೂಲಕ ನೆರವೇರುತ್ತಿದೆ.
ಕಿರಿಯರ ತಂಡದ ಕೋಚ್ ಆಗಿ ದ್ರಾವಿಡ್ ಈಗಾಗಲೇ ಎಷ್ಟೋ ಯುವ, ಪ್ರತಿಭಾವಂತ ಆಟಗಾರರನ್ನು ಟೀಂ ಇಂಡಿಯಾಕ್ಕೆ ನೀಡಿದ್ದಾರೆ. ಇದೀಗ ಟೀಂ ಇಂಡಿಯಾಗೇ ಕೋಚ್ ಆಗಲಿದ್ದು, ಈ ತಂಡದಲ್ಲಿ ಕೆಲವು ಆಟಗಾರರಿಗೆ ಇದು ಚೊಚ್ಚಲ ಸರಣಿ.
ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿರುವ ದೇವದತ್ತ್ ಪಡಿಕ್ಕಲ್ ನಂತಹ ಯುವ ಆಟಗಾರರಿಗೆ ದ್ರಾವಿಡ್ ಮಾರ್ಗದರ್ಶನ ನೀಡಲಿದ್ದಾರೆ. ದ್ರಾವಿಡ್ ಗರಡಿಯಲ್ಲಿ ಪಳಗಲಿರುವ ಇವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೇಗೆ ಆಡಬೇಕೆಂಬುದನ್ನು ಚೆನ್ನಾಗಿಯೇ ಅರಿತುಕೊಳ್ಳುತ್ತಾರೆ. ಹೀಗಾಗಿ ಲಂಕಾದಲ್ಲಿ ದ್ರಾವಿಡ್ ಹೊಸದೊಂದು ಟೀಂ ಇಂಡಿಯಾವನ್ನು ಕಟ್ಟಿಕೊಡಲಿರುವುದಂತೂ ಸತ್ಯ.