ಮುಂಬೈ: ಮುಂಬರುವ ಟಿ20 ವಿಶ್ವಕಪ್ ನಲ್ಲಿ ಸ್ಥಾನ ಪಡೆಯಲು ಟೀಂ ಇಂಡಿಯಾ ಯುವ ಕ್ರಿಕೆಟಿಗರು ಈಗಾಗಲೇ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ತಮಗೆ ಸಿಕ್ಕ ಅವಕಾಶಗಳನ್ನು ಯುವ ಆಟಗಾರರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಹಾಗಿದ್ದರೂ ಟಿ20 ವಿಶ್ವಕಪ್ ತಂಡಕ್ಕೆ ಎಲ್ಲರೂ ಆಯ್ಕೆಯಾಗಲು ಸಾಧ್ಯವಿಲ್ಲ. ಆಯ್ಕೆಯಾಗಬಹುದಾದ ಆಟಗಾರರು ಯಾರಿರಬಹುದು ನೋಡೋಣ.
ಸೂರ್ಯಕುಮಾರ್ ಯಾದವ್
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ಪರಿಣಾಮ ಸೂರ್ಯಕುಮಾರ್ ಯಾದವ್ ಗೆ ಟೀಂ ಇಂಡಿಯಾಗೂ ಅವಕಾಶ ಸಿಕ್ಕಿದೆ. ತಮಗೆ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದ ಅವರು ಅರ್ಧಶತಕವನ್ನೂ ಸಿಡಿಸಿದ್ದರು. ಹೀಗಾಗಿ ಟಿ20 ಫಾರ್ಮ್ಯಾಟ್ ಗೆ ಅವರು ಪಕ್ಕಾ ಆಯ್ಕೆಯಾಗುತ್ತಾರೆ.
ಇಶಾನ್ ಕಿಶನ್
ಮತ್ತೊಬ್ಬ ಮುಂಬೈ ಇಂಡಿಯನ್ಸ್ ಪ್ರತಿಭೆ. ಬ್ಯಾಟಿಂಗ್ ಜೊತೆ ವಿಕೆಟ್ ಕೀಪಿಂಗ್ ಕೂಡಾ ಮಾಡುವ ಸಾಮರ್ಥ್ಯ ಅವರಿಗಿರುವ ಪ್ಲಸ್ ಪಾಯಿಂಟ್. ಹೀಗಾಗಿ ರಿಷಬ್ ಪಂತ್ ಗೆ ಬ್ಯಾಕ್ ಅಪ್ ಆಗಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಬಹುದು.
ರಾಹುಲ್ ಚಹರ್
ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ಫಾರ್ಮ್ ಕೊರತೆಯಿಂದ ಬಳಲುತ್ತಿರುವಾಗ ಟೀಂ ಇಂಡಿಯಾಕ್ಕೆ ಸ್ಪಿನ್ ಆಯ್ಕೆ ಒದಗಿಸಿದವರು ರಾಹುಲ್ ಚಹರ್. ಸದ್ಯಕ್ಕೆ ಶ್ರೀಲಂಕಾ ವಿರುದ್ಧದ ಸರಣಿಗೆ ಅವರು ಆಯ್ಕೆಯಾಗಿದ್ದು, ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ಖಂಡಿತವಾಗಿಯೂ ಟಿ20 ವಿಶ್ವಕಪ್ ತಂಡದಲ್ಲಿರಲಿದ್ದಾರೆ.