Publish Date: Thu, 17 Dec 2020 (08:12 IST)
Updated Date: Thu, 17 Dec 2020 (08:14 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಜಿದ್ದಾಜಿದ್ದಿನ ಟೆಸ್ಟ್ ಸರಣಿ ಇಂದಿನಿಂದ ಆರಂಭವಾಗಲಿದೆ. ಇಂದು ಸರಣಿಯ ಮೊದಲ ಪಂದ್ಯ ಹಗಲು ರಾತ್ರಿಯಾಗಿ ನಡೆಯಲಿದೆ.
ಅಡಿಲೇಡ್ ನ ಓವಲ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಈಗಾಗಲೇ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಹೊನಲು ಬೆಳಕಿನಲ್ಲಿ ಆಡಿದ ಅನುಭವ ಪಡೆದಿದೆ. ಆದರೆ ಬೌಲರ್ ಗಳು ನಿರೀಕ್ಷಿತ ಪ್ರದರ್ಶನ ನೀಡದೇ ಇರುವುದು ಚಿಂತೆಯ ವಿಷಯವಾಗಿದೆ. ಇನ್ನು, ಆಸ್ಟ್ರೇಲಿಯಾ ಕಡೆಗೆ ನೋಡಿದರೆ ಹೊಡೆಬಡಿಯ ಆರಂಭಿಕ ಡೇವಿಡ್ ವಾರ್ನರ್ ಅನುಪಸ್ಥಿತಿ ಕಾಡಿತಾದರೂ ಸ್ಟೀವ್ ಸ್ಮಿತ್ ಬ್ಯಾಟಿಂಗ್ ನ ಟ್ರಂಪ್ ಕಾರ್ಡ್ ಆಗಿರಲಿದ್ದಾರೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 9.30 ರಿಂದ ಆರಂಭವಾಗಲಿದೆ.