Publish Date: Wed, 16 Dec 2020 (09:27 IST)
Updated Date: Wed, 16 Dec 2020 (09:29 IST)
ಸಿಡ್ನಿ: ಕೊನೆಗೂ ಹಿಟ್ ಮ್ಯಾನ್ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಪಾಲ್ಗೊಳ‍್ಳಲು ಕಾಂಗಾರೂ ನಾಡಿಗೆ ಪ್ರಯಾಣ ಬೆಳೆಸಿದ್ದಾರೆ.
ನಿನ್ನೆ ರೋಹಿತ್ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಇಲ್ಲಿ 14 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್ ಅವಧಿ ಪೂರೈಸಲಿದ್ದಾರೆ. ಅದಾದ ಬಳಿಕ ಟೀಂ ಇಂಡಿಯಾ ಜತೆ ಕೂಡಿಕೊಳ್ಳಲಿದ್ದಾರೆ. ಅದಕ್ಕೂ ಮೊದಲು ಅವರು ಮತ್ತೊಮ್ಮೆ ದೈಹಿಕ ಪರೀಕ್ಷೆಗೊಳಗಾಗಲಿದ್ದಾರೆ. ಅದಾದ ಬಳಿಕ ಟೆಸ್ಟ್ ಸರಣಿಯ ಭಾಗವಾಗಲಿದ್ದಾರೆ.