Publish Date: Wed, 16 Dec 2020 (16:39 IST)
Updated Date: Wed, 16 Dec 2020 (16:41 IST)
ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ತಂಡ ಪ್ರಕಟಿಸಲಾಗಿದ್ದು, ಆಟಗಾರರ ಲಿಸ್ಟ್ ನೋಡಿ ಅಭಿಮಾನಿಗಳು ಗರಂ ಆಗಿದ್ದಾರೆ.
ಆಡುವ 11 ರ ಬಳಗದ ಪಟ್ಟಿಯನ್ನು ಟೀಂ ಇಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ಅಚ್ಚರಿಯೆಂಬಂತೆ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಮತ್ತು ಶಬ್ನಂ ಗಿಲ್ ರನ್ನು ಕಡೆಗಣಿಸಿ ಪೃಥ್ವಿ ಶಾಗೆ ಆರಂಭಿಕ ಸ್ಥಾನಕ್ಕೆ ಮಣೆ ಹಾಕಿರುವುದು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಶಾ ಅಭ್ಯಾಸ ಪಂದ್ಯದಲ್ಲೂ ವಿಫಲರಾಗಿದ್ದರು. ಅವರ ಬದಲು ಶಬ್ನಂ ಗಿಲ್ ಗೆ ಸ್ಥಾನ ನೀಡಬಹುದಿತ್ತು ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಮತ್ತೆ ಕೆಲವರು ಆಸ್ಟ್ರೇಲಿಯನ್ನರೇ ನಿಮಗೆ ಮೊದಲ ವಿಕೆಟ್ ಈಗಲೇ ಫ್ರೀ ಗಿಫ್ಟ್ ಎಂದು ಪೃಥ್ವಿ ಶಾರನ್ನು ಅಣಕವಾಡಿದ್ದಾರೆ.