Publish Date: Wed, 16 Dec 2020 (09:16 IST)
Updated Date: Wed, 16 Dec 2020 (09:18 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ಸಿದ್ಧರಾಗಿರುವ ಟೀಂ ಇಂಡಿಯಾ ಎದುರಾಳಿಗಳ 20 ವಿಕೆಟ್ ಕಬಳಿಸುವಷ್ಟು ಸಮರ್ಥರಾಗಿದ್ದಾರೆ ಎಂದು ಉಪನಾಯಕ ಅಜಿಂಕ್ಯಾ ರೆಹಾನೆ ಹೇಳಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ರೆಹಾನೆ ನಮ್ಮ ಬೌಲರ್ ಗಳು ಆಸ್ಟ್ರೇಲಿಯಾವನ್ನು ಎರಡೂ ಇನಿಂಗ್ಸ್ ಗಳಲ್ಲಿ ಆಲೌಟ್ ಮಾಡುವಷ್ಟು ಸಮರ್ಥರಾಗಿದ್ದಾರೆ. ನಮ್ಮ ಬೌಲಿಂಗ್ ಆಕ್ರಮಣ ಪ್ರಬಲವಾಗಿದೆ. ಆದರೆ ಅನುಭವಿ ಇಶಾಂತ್ ಶರ್ಮಾರನ್ನು ಖಂಡಿತಾ ಮಿಸ್ ಮಾಡಿಕೊಳ್ಳಲಿದ್ದೇವೆ ಎಂದಿದ್ದಾರೆ.