Publish Date: Wed, 16 Dec 2020 (10:26 IST)
Updated Date: Wed, 16 Dec 2020 (10:28 IST)
ಅಡಿಲೇಡ್: ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರು ಅಭ್ಯಾಸದ ವೇಳೆ ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ! ಆದರೆ ಇದು ಗಲಾಟೆಯಲ್ಲ, ಬದಲಾಗಿ ಅಭ್ಯಾಸದ ಒಂದು ಭಾಗವಷ್ಟೇ.
ಗಂಭೀರ ಅಭ್ಯಾಸಕ್ಕೆ ಕೊಂಚ ಮೋಜಿನ ಟಚ್ ಕೊಟ್ಟ ಟೀಂ ಇಂಡಿಯಾ ಕ್ರಿಕೆಟಿಗರು ಕೈ ಕೈ ಹಿಡಿದು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಒಂದೇ ವಸ್ತುವನ್ನು ಹೊಂಚು ಹಾಕಿ ಇಬ್ಬರೂ ಹಿಡಿಯುವ ಆಟವಾಡಿದ್ದಾರೆ. ಇದೆಲ್ಲಾ ಪಂದ್ಯಕ್ಕೆ ಮೊದಲು ರಿಲ್ಯಾಕ್ಸ್ ಜತೆಗೆ ದೈಹಿಕವಾಗಿ ವ್ಯಾಯಾಮ ಸಿಗಲು ಕೊಹ್ಲಿ ಪಡೆ ಮಾಡಿದ ತಂತ್ರದ ಭಾಗವಷ್ಟೇ.