Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತವರಿನಲ್ಲಿ ಅಬ್ಬರಿಸಿದ ಅಶ್ವಿನ್, ಬಾಂಗ್ಲಾ ತಂಡಕ್ಕೆ ಹೀನಾಯ ಸೋಲು

Test Match

Sampriya

ಚೆನ್ನೈ , ಭಾನುವಾರ, 22 ಸೆಪ್ಟಂಬರ್ 2024 (13:28 IST)
Photo Courtesy X
ಚೆನ್ನೈ: ತವರಿನಲ್ಲಿ ರವಿಚಂದ್ರನ್  ಅಶ್ವಿನ್ ಅಮೋಘ ಶತಕದ ಬಳಿಕ 10 ವಿಕೆಟ್ ಕಬಳಿಸಿದ್ದರಿಂದ ಬಾಂಗ್ಲಾದೇಶ ನಾಲ್ಕನೇ ದಿನ ಚೆನ್ನೈನಲ್ಲಿ ಭಾರತ ತಂಡವು 280 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಅಶ್ವಿನ್ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಪಡೆಯುವ ಮೂಲಕ ಬಾಂಗ್ಲಾದೇಶವನ್ನು ಧ್ವಂಸ ಮಾಡಿದರು.

ಭಾರತ ನೀಡಿದ 515 ರನ್‌ಗಳ ಬೃಹತ್ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 234 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0ಮುನ್ನಡೆ ಪಡೆದಿದೆ.

ಬಾಂಗ್ಲಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕ  ನಜ್ಮುಲ್ ಹೊಸೈನ್ ಶಾಂಟೊ (82 ರನ್) ಮಾತ್ರ ಬ್ಯಾಟಿಂಗ್‌ನೊಂದಿಗೆ ಸ್ವಲ್ಪ ಪ್ರತಿರೋಧ ನೀಡಿದರು.

ಚೆನ್ನೈನ ಎಮ್‌ಎ ಚಿದಂಬರಂ ಸ್ಟೇಡಿಯಂನಲ್ಲಿ ಅವರ ತವರು ಮೈದಾನದಲ್ಲಿ ಆಡಿದ ಅಶ್ವಿನ್ ಎರಡು ಬಾಂಗ್ಲಾದೇಶ ಇನ್ನಿಂಗ್ಸ್‌ಗಳಲ್ಲಿ 10 ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಮೊದಲ ದಿನದ ಬ್ಯಾಟಿಂಗ್ ವೀರಾವೇಶವನ್ನು (133 ಎಸೆತಗಳಲ್ಲಿ 113 ರನ್) ಅನುಸರಿಸಿದರು. ಅವರನ್ನು ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಗುರುವಾದ ಭಾರತ: ಚೆಸ್‌ ಒಲಿಂಪಿಯಾಡ್‌ನಲ್ಲಿ ಪುರುಷರ ತಂಡಕ್ಕೆ ಐತಿಹಾಸಿಕ ಚಿನ್ನದ ಪದಕ