Select Your Language

Notifications

webdunia
webdunia
webdunia
webdunia

IND vs BAN Test: ಬೆಳಿಗ್ಗೆಯೇ ಬ್ಯಾಟ್ ಗೆ ಪೂಜೆ ಸಲ್ಲಿಸಿದ್ದ ರಿಷಭ್ ಪಂತ್ ಗೆ ಮೋಸ ಮಾಡದ ಭಗವಂತ (Video)

Rishabh Pant

Krishnaveni K

ಚೆನ್ನೈ , ಶನಿವಾರ, 21 ಸೆಪ್ಟಂಬರ್ 2024 (13:30 IST)
Photo Credit: X
ಚೆನ್ನೈ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲಿ ರಿಷಭ್ ಪಂತ್, ಶುಬ್ಮನ್ ಗಿಲ್ ಶತಕ ಸಿಡಿಸಿ ಭಾರತಕ್ಕೆ ದೊಡ್ಡ ಮೊತ್ತ ಕಲೆ ಹಾಕಲು ನೆರವಾಗಿದ್ದಾರೆ. ಗೆಲುವಿಗೆ 516 ರನ್ ಗಳ ಬೃಹತ್ ಮೊತ್ತ ಗುರಿ ಬೆನ್ನತ್ತಿರುವ ಬಾಂಗ್ಲಾದೇಶ ಇತ್ತೀಚೆಗಿನ ವರದಿ ಬಂದಾಗ ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದೆ.

ಇಂದಿನ ದಿನದಾಟದಲ್ಲಿ ರಿಷಭ್ ಪಂತ್, ಶುಬ್ಮನ್ ಗಿಲ್ ಇನಿಂಗ್ಸ್ ಗಮನ ಸೆಳೆಯಿತು. ನಿನ್ನೆ ಅಜೇಯರಾಗುಳಿದಿದ್ದ ಜೋಡಿ ಇಂದು ಭೋಜನ ವಿರಾಮದವರೆಗೂ ವಿಕೆಟ್ ಕಳೆದುಕೊಳ್ಳದೇ ಪೈಪೋಟಿಗೆ ಬಿದ್ದವರಂತೆ ಶತಕ ಸಿಡಿಸಿದರು. ಹಾಗೆ ನೋಡಿದರೆ ಗಿಲ್ ಮೊದಲೇ ಅರ್ಧಶತಕ ಗಳಿಸಿದ್ದರು.

ಆದರೆ ಅರ್ಧಶತಕದ ಬಳಿಕ ಗೇರ್ ಬದಲಾಯಿಸಿದ ರಿಷಭ್ ಪಂತ್, ಬೌಂಡರಿ, ಸಿಕ್ಸರ್ ಗಳ ಮೂಲಕ ಗಿಲ್ ಗಿಂತಲೂ ಮೊದಲೇ ಶತಕ ಪೂರೈಸಿದರು. 128 ಎಸೆತ ಎದುರಿಸಿದ ಪಂತ್ 4 ಸಿಕ್ಸರ್ ಗಳೊಂದಿಗೆ 109 ರನ್ ಗಳಿಸಿ ಔಟಾದರು. ಇಂದು ಬೆಳಿಗ್ಗೆ ದಿನದಾಟ ಆರಂಭಕ್ಕೆ ಮುನ್ನ ತಮ್ಮ ಬ್ಯಾಟ್ ನ್ನು ಟೇಬಲ್ ಮೇಲಿರಿಸಿ ಪೂಜೆ ಮಾಡಿ ಕಣಕ್ಕಿಳಿದಿದ್ದ ರಿಷಭ್ ಗೆ ದೇವರು ಮೋಸ ಮಾಡಲಿಲ್ಲ. ಅಪಘಾತದ ನಂತರ ಒಂದು ವರ್ಷ ಬ್ರೇಕ್ ಪಡೆದುಕೊಂಡಿದ್ದ ರಿಷಭ್ ಗೆ ಇದು ಟೆಸ್ಟ್ ಕಮ್ ಬ್ಯಾಕ್ ಪಂದ್ಯವಾಗಿತ್ತು. ಮೊದಲ ಪಂದ್ಯದಲ್ಲೇ ತಮ್ಮ ಝಲಕ್ ತೋರಿಸಿದ್ದಾರೆ.

ಅವರಿಗೆ ಉತ್ತಮ ಸಾಥ್ ನೀಡುತ್ತಿದ್ದ ಶುಬ್ಮನ್ ಗಿಲ್ ಕೂಡಾ 119 ರನ್ ಗಳಿಸಿ ಕೊನೆಯವರೆಗೂ ಅಜೇಯರಾಗುಳಿದರು. ರಿಷಭ್ ಔಟಾದ ಬಳಿಕ ಕ್ರೀಸ್ ಗೆ ಬಂದಿದ್ದ ಕೆಎಲ್ ರಾಹುಲ್ ಇಂದು ತಮಗೆ ಸಿಕ್ಕ ಕಿರು ಅವಧಿಯಲ್ಲೇ ಕೆಲವು ಮನಮೋಹಕ ಹೊಡೆತಗಳ ಮೂಲಕ ಗಮನ ಸೆಳೆದರು. ಅವರು ಅಜೇಯ 22 ರನ್ ಗಳಿಸಿದರು. 4 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿದ್ದಾಗ ನಾಯಕ ರೋಹಿತ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.


Share this Story:

Follow Webdunia kannada

ಮುಂದಿನ ಸುದ್ದಿ

IND vs BAN Test: ಬಾಂಗ್ಲಾದೇಶ ಫೀಲ್ಡಿಂಗ್ ತಾನೇ ಸೆಟ್ ಮಾಡಿದ ರಿಷಭ್ ಪಂತ್ ಫನ್ನಿ ವಿಡಿಯೋ