Select Your Language

Notifications

webdunia
webdunia
webdunia
webdunia

IND vs BAN Test: ಬಾಂಗ್ಲಾದೇಶ ಫೀಲ್ಡಿಂಗ್ ತಾನೇ ಸೆಟ್ ಮಾಡಿದ ರಿಷಭ್ ಪಂತ್ ಫನ್ನಿ ವಿಡಿಯೋ

Rishabh Pant

Krishnaveni K

ಚೆನ್ನೈ , ಶನಿವಾರ, 21 ಸೆಪ್ಟಂಬರ್ 2024 (11:00 IST)
Photo Credit: X
ಚೆನ್ನೈ: ರಿಷಭ್ ಪಂತ್ ಕ್ರೀಸ್ ನಲ್ಲಿದ್ದಷ್ಟು ಹೊತ್ತು ವೀಕ್ಷಕರಿಗೆ ಮನರಂಜನೆಗೆ ಕೊರತೆಯಿರಲ್ಲ. ಇದು ಬಾಂಗ್ಲಾದೇಶ ವಿರುದ್ಧದ ಇಂದಿನ ಮೂರನೇ ದಿನದಾಟದಲ್ಲೂ ನಡೆದಿದೆ.

ಭಾರತದ ದ್ವಿತೀಯ ಇನಿಂಗ್ಸ್ ನಲ್ಲಿ ರಿಷಭ್ ಪಂತ್ ಮತ್ತು ಶುಬ್ಮನ್ ಗಿಲ್ ಜೋಡಿ ಬಾಂಗ್ಲಾ ಬೌಲರ್ ಗಳನ್ನು ರೋಸ್ಟ್ ಮಾಡುತ್ತಿದ್ದಾರೆ. ಈ ನಡುವೆ ರಿಷಬ್ ಮೊದಲ ಇನಿಂಗ್ಸ್ ನಲ್ಲಿ ಅರ್ಧಶತಕ ಗಳಿಸುವಲ್ಲಿ ಎಡವಿದ್ದರು. ಆದರೆ ದ್ವಿತೀಯ ಇನಿಂಗ್ಸ್ ನಲ್ಲಿ ಆ ತಪ್ಪು ಮಾಡಲಿಲ್ಲ.

ಅರ್ಧಶತಕ ಸಿಡಿಸಿದ ರಿಷಭ್ ತಮ್ಮ ಜೊತೆಗಾರ ಗಿಲ್ ಜೊತೆಗೂಡಿ 80 ಪ್ಲಸ್ ರನ್ ಗಳ ಜೊತೆಯಾಟವಾಡಿದ್ದಾರೆ. ಇನ್ನು ರಿಷಭ್ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸುತ್ತಿದ್ದರೆ ಇತ್ತ ಬಾಂಗ್ಲಾ ಬೌಲರ್ ಗಳು ದಿಕ್ಕೆಟ್ಟಿದ್ದರು. ಅವರಿಗೆ ಯಾವ ರೀತಿ ಫೀಲ್ಡ್ ಸೆಟ್ ಮಾಡುವುದು ಎಂದು ತಲೆಕೆಡಿಸಿಕೊಂಡಿದ್ದರು.

ಈ ವೇಳೆ ಸ್ವತಃ ರಿಷಭ್ ಎದುರಾಳಿಗಳಿಗೆ ಫೀಲ್ಡಿಂಗ್ ಸೆಟ್ ಮಾಡಲು ಸಹಾಯ ಮಾಡಿದ್ದಾರೆ. ಇಲ್ಲಿ ಬಾ ಎಂದು ತಾನೇ ಬಾಂಗ್ಲಾ ಫೀಲ್ಡರ್ ಗಳನ್ನು ನಿಲ್ಲಿಸಿದ್ದು ಫನ್ನಿಯಾಗಿತ್ತು. ರಿಷಭ್ ಫೀಲ್ಡಿಂಗ್ ಸೆಟ್ ಮಾಡುವ ವಿಡಿಯೋ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

IND vs BAN Test: ಶುಬ್ಮನ್ ಗಿಲ್ ಪಾಸ್, ಕೆಎಲ್ ರಾಹುಲ್ ಗೆ ಇಂದು ಮಹತ್ವದ ದಿನ