Publish Date: Sun, 25 Sep 2022 (10:57 IST)
Updated Date: Sun, 25 Sep 2022 (10:59 IST)
ಹೈದರಾಬಾದ್: ಗಂಡ ಬೇರೊಬ್ಬಳನ್ನು ಇಷ್ಟಪಡುತ್ತಾನೆಂದರೆ ಯಾವ ಹೆಂಡತಿಯೂ ಸಹಿಸಲಾಳರು. ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡನ ಹಳೇ ಲವ್ ವಿಚಾರ ಗೊತ್ತಾಗಿ ಆಕೆಯ ಜೊತೆಗೆ ಮದುವೆ ಮಾಡಿಸಿ ಜೊತೆಯಾಗಿ ಸಂಸಾರ ಮಾಡಲು ನಿರ್ಧರಿಸಿದ್ದಾಳೆ.
ಯೂ ಟ್ಯೂಬರ್ ಕಲ್ಯಾಣ್ ಎಂಬಾತನ ಜೊತೆ ವಿಮಲಾ ರೀಲ್ಸ್ ಮಾಡುತ್ತಲೇ ಪರಿಚಯವಾಗಿ ಮದುವೆಯಾಗಿದ್ದಳು. ಆದರೆ ಕೆಲವು ದಿನಗಳ ಬಳಿಕ ಆಕೆಗೆ ಗಂಡ ಈ ಮೊದಲು ಬೇರೊಬ್ಬ ಯುವತಿಯನ್ನು ಇಷ್ಟಪಟ್ಟಿದ್ದ. ಆದರೆ ಅನಿವಾರ್ಯವಾಗಿ ದೂರವಾದರು ಎಂದು ಗೊತ್ತಾಗಿದೆ. ಇತ್ತೀಚೆಗೆ ಆ ಹಳೇ ಲವ್ವರ್ ಕಲ್ಯಾಣ್ ಜೊತೆ ತನಗೆ ಮದುವೆ ಮಾಡಿಸುವಂತೆ ನಿರ್ಮಲಾಳಿಗೆ ಬೇಡಕೆಯಿಟ್ಟಿದ್ದಳು.
ಕೊನೆಗೆ ಗಂಡ ಮತ್ತು ಆತನ ಹಳೇ ಲವ್ವರ್ ನ್ನು ಮದುವೆ ಮಾಡಿಸಿದ ಮಹಿಳೆ ಈಗ ಇಬ್ಬರೂ ಜೊತೆಯಾಗಿ ಒಂದೇ ಮನೆಯಲ್ಲಿ ಸಂಸಾರ ಮಾಡಲು ನಿರ್ಧರಿಸಿದ್ದಾಳೆ.