Publish Date: Sun, 25 Sep 2022 (08:50 IST)
Updated Date: Sun, 25 Sep 2022 (09:17 IST)
ಹೈದರಾಬಾದ್: ನಾಗಚೈತನ್ಯ ಜೊತೆ ವಿಚ್ಛೇದನದ ಬಳಿಕ ಸಮಂತಾ ಋತು ಪ್ರಭು ಮರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಸಮಂತಾ-ನಾಗಚೈತನ್ಯ ಕಳೆದ ಅಕ್ಟೋಬರ್ ನಲ್ಲಿ ಬೇರೆಯಾಗುತ್ತಿರುವುದಾಗಿ ಬಹಿರಂಗಪಡಿಸಿದ್ದರು. ಇದಾದ ಬಳಿಕ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಬಾರಿ ಟ್ರೋಲ್ ಗೊಳಗಾಗಿದ್ದು ಇದೆ. ಇತ್ತೀಚೆಗೆ ಅವರ ಅನಾರೋಗ್ಯದ ಬಗ್ಗೆಯೂ ಸುದ್ದಿಗಳು ಹರಿದಾಡಿತ್ತು.
ಸಮಂತಾ ಅತೀ ಹೆಚ್ಚು ಗೌರವಿಸುವ ಸದ್ಗುರು ಜಗದೀಶ್ ವಾಸುದೇವ ಗುರೂಜಿ ಸಮಂತಾಗೆ ಮರು ಮದುವೆಯಾಗಲು ಸಲಹೆ ನೀಡಿದ್ದಾರಂತೆ. ತಮ್ಮ ಗುರೂಜಿ ಹೇಳಿದ ಸಲಹೆಯನ್ನು ಸಮಂತಾ ಪಾಲಿಸಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ.