Publish Date: Sun, 18 Sep 2022 (11:54 IST)
Updated Date: Sun, 18 Sep 2022 (11:56 IST)
ಶಿವಮೊಗ್ಗ : ನಾನು ಇವತ್ತೇ ಮದುವೆ ಗಂಡು ಆಗಲು ತಯಾರಾಗಿದ್ದೇನೆ ಎಂದು ಹೇಳುವ ಮೂಲಕ ತಾವು ಮಂತ್ರಿಯಾಗಲು ಸಿದ್ಧರಿರುವುದಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರು ಮಂತ್ರಿ ಸ್ಥಾನ ನೀಡದಿದ್ದಕ್ಕೆ ನೀವು ಅಸಮಾಧಾನಗೊಂಡಿದ್ದಾರಾ? ಇದಕ್ಕಾಗಿಯೇ ಸದನಕ್ಕೆ ಹಾಜರಾಗುತ್ತಿಲ್ಲವಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು, ಈ ಬಗ್ಗೆ ನಮ್ಮ ನಾಯಕರಾದ ಯಡಿಯೂರಪ್ಪ ಹಾಗೂ ನಳಿನ್ ಕುಮಾರ್ ಕಟೀಲ್ ಅವರನ್ನು ಕೇಳಬೇಕು.
ನನ್ನನ್ನು ಕೇಳಿದರೆ ನಾನು ಏನು ಹೇಳುವುದಕ್ಕೆ ಆಗುತ್ತದೆ. ಇವತ್ತು ಬಂದು ಮಂತ್ರಿ ಆಗು ಅಂದರೆ ಇವತ್ತೆ ಆಗುತ್ತೇನೆ ಇದೆಲ್ಲಾ ನನ್ನ ಕೈಯಲ್ಲಿ ಇಲ್ಲ.
ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಕಟೀಲ್ ಹಾಗೂ ಕೇಂದ್ರದ ನಾಯಕರು ಚರ್ಚೆ ಮಾಡಬೇಕು. ಆದರೆ ಏಕೆ ಅವರು ಯಾಕೆ ಹಿಂದೆ ಮುಂದೆ ನೋಡುತ್ತಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.