Publish Date: Wed, 09 Feb 2022 (15:27 IST)
Updated Date: Wed, 09 Feb 2022 (16:29 IST)
ಲಕ್ನೋ : ಕಾನ್ಪುರದ ನರ್ವಾಲ್ ಪ್ರದೇಶದ ಜಮೀನಿನಲ್ಲಿ 10 ವರ್ಷದ ಬಾಲಕನ ದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು,
ಮೃತ ದೇಹವನ್ನು ಕಾನ್ಪುರ ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಕಾನ್ಪುರ ನರ್ವಾಲ್ ಜಿಲ್ಲೆಯ ಬೆಹ್ತಾ ಗ್ರಾಮದ ನಿವಾಸಿಯಾಗಿರುವ ಬಾಲಕ ಸೋಮವಾರದಿಂದ ನಾಪತ್ತೆಯಾಗಿದ್ದನು.
ಅದಕ್ಕೆ ಪೋಷಕರು ಬಾಲಕನನ್ನು ಪತ್ತೆ ಮಾಡಿ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಪ್ರಕರಣದ ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಬಾಲಕನ ದೇಹ ಸಿಕ್ಕಿದ್ದು, ಚಿತ್ರಹಿಂಸೆ ಕೊಟ್ಟು ಸಾಯಿಸಿರುವುದು ಪತ್ತೆಯಾಗಿದೆ.