Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಯವಕನೊಬ್ಬ ತನ್ನ ಜೀವಮಾನದ ಶಾಕ್ಗೆ ಒಳಗಾಗಿದ್ದಾನೆ.
ಹೌದು, ಕಂಪ್ಯೂಟರ್ ಕ್ಷೇತ್ರದಲ್ಲಿ ಎರಡು ದಶಕಗಳಿಂದ ಶರವೇಗದಲ್ಲಿ ಸಾಗುತ್ತಿರುವ ಬೆಂಗಳೂರಿನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ರಾಜಧಾನಿಯ ಆಸ್ಟಿನ್ ಟೌನ್ನಲ್ಲಿ ನೆಲೆಸಿರುವ ಯುವಕನೊಬ್ಬ ತನ್ನ ಗರ್ಲ್ ಫ್ರೆಂಡ್ ಜೊತೆಗಿರುವ ಖಾಸಗಿ ಕ್ಷಣಗಳ ವಿಡಿಯೋ ಚಿತ್ರಗಳನ್ನು ಕಾಣಬಾರದ ಕಡೆ ಕಂಡಿದ್ದಾನೆ! ಅಂದರೆ ಅಶ್ಲೀಲ ವೆಬ್ಸೈಟ್ಗಳಲ್ಲಿ ಇವರಿಬ್ಬರ ಖಾಸಗೀ ಜೀವನದ ಚಿತ್ರಗಳು ಕಂಡುಬಂದಿವೆ.
ಬೆಂಗಳೂರಿನ ಸೈಬರ್, ಎಕನಾಮಿಕ್ ಅಂಡ್ ನಾರ್ಕೋಟಿಕ್ಸ್ ಕ್ರೈಂ – ಸಿಇಎನ್ ಮೂಲಗಳನ್ನಾಧರಿಸಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಇತ್ತೀಚೆಗೆ ಆ ಯುವಕ ಮತ್ತು ಯುವತಿ ಖಾಸಗಿ ಹೋಟೆಲಿನಲ್ಲಿ ತಂಗಿದ್ದರು.
ಬಿಪಿಒ ಉದ್ಯೋಗಿಯಾಗಿರುವ ಬಾಧಿತ ಯುವಕ ಮತ್ತು ಆತನ ಗೆಳತಿ ಹೋಟೆಲಿನಲ್ಲಿ ಖಾಸಗಿಯಾಗಿ ತೊಡಗಿದ್ದಾಗ ಅಪರಿಚಿತ ದುಷ್ಕರ್ಮಿಗಳು ಆಪ್ತ ಕ್ರಿಯೆಯನ್ನು ವಿಡಿಯೋ ಮಾಡಿ ಸೆರೆಹಿಡಿದಿದ್ದಾರೆ.
ಜನವರಿ 21ರಂದು ಈ ದುಷ್ಕೃತ್ಯ ಯುವಕನ ಗಮನಕ್ಕೆ ಬಂದಿದೆ. ಅಂದು ಕಂಪ್ಯೂಟರ್ನಲ್ಲಿ ಸಂತ್ರಸ್ತ ಯುವಕ ಸೆಕ್ಸ್ ವೆಬ್ಸೈಟ್ಗಳನ್ನು ತಡಕಾಡುತ್ತಿದ್ದಾಗ ತನ್ನದೇ ಚಿತ್ರಗಳನ್ನು ನೋಡಿ ದಂಗಾಗಿದ್ದಾನೆ.
ತನ್ನ ಗೆಳತಿಯ ಜೊತೆಗೆ ಈ ಹಿಂದೆ ಖಾಸಗಿ ಹೋಟೆಲಿನಲ್ಲಿ ತಂಗಿದ್ದಾಗಿನ ತನ್ನ ಆಪ್ತ ಕ್ರಿಯೆಗಳನ್ನು ಬಿತ್ತಿರುಸುವ ವಿಡಿಯೋಗಳು ಅದಾಗಿದ್ದವು. ಬಾಧಿತರ ಚಿತ್ರಗಳನ್ನು ಮರೆಮಾಚಲಾಗಿತ್ತಾದರೂ ತನ್ನ ಎದೆಯ ಮೇಲಿನ ಹುಟ್ಟು ಮಚ್ಚೆಯ ಮೂಲಕ ಈ ಚಿತ್ರಗಳು ತನ್ನವೇ ಎಂದು ಯುವಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ. ತಡಮಾಡದೆ ಜನವರಿ 24ರಂದು ಅಇಓ ಪೊಲೀಸ್ ಠಾಣೆಯಲ್ಲಿ ಯುವಕ ದೂರು ದಾಖಲಿಸಿದ್ದಾನೆ.