Publish Date: Fri, 04 Feb 2022 (08:06 IST)
Updated Date: Fri, 04 Feb 2022 (09:08 IST)
ಬೆಂಗಳೂರು : ಪತ್ನಿಯೊಬ್ಬಳು 20 ಗುಂಟೆ ಜಮೀನಿಗಾಗಿ ಮಗನ ಜೊತೆಗೆ ಸೇರಿ ಪತಿಯನ್ನೇ ಕಿಡ್ನಾಪ್ ಮಾಡಿ ಚಾಕುವಿನಿಂದ ಇರಿದು ಕೊಂದ ಘಟನೆ ನಗರದ ಹೊರವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ.
ಚನ್ನಿಗರಾಯಪ್ಪ ಕೊಲೆಯಾದ ವ್ಯಕ್ತಿ. ಮೃತನು ಎರಡು ಮದುವೆ ಆಗಿದ್ದು, ಇಬ್ಬರು ಪತ್ನಿಯರಿಗೆ ಆಸ್ತಿ ಹಂಚಿಕೆ ಮಾಡುವ ವೇಳೆ ಇಪ್ಪತ್ತು ಗುಂಟೆ ಜಮೀನು ವಿಚಾರವಾಗಿ ವಿವಾದವಾಗಿತ್ತು. ಇದೇ ವಿಚಾರಕ್ಕೆ ಆರೋಪಿಗಳು ಮತ್ತು ಚನ್ನಿಗರಾಯಪ್ಪನ ಮಧ್ಯೆ ಗಲಾಟೆ ನಡೆದು ಪತಿಯನ್ನು ಕಿಡ್ನಾಪ್ ಮಾಡಿದ್ದರು.
ಕಿಡ್ನಾಪ್ ಮಾಡಿ ಕಾರಿನಲ್ಲಿ 22 ಬಾರಿ ಚಾಕುವಿನಿಂದ ಕೊಲೆ ಮಾಡಿ ಬೆಂಕಿ ಹಾಕಿ ಸುಟ್ಟಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚನ್ನಿಗರಾಯಪ್ಪ ಪತ್ನಿ ಯಶೋಧ, ಮಗ ನಿಖಿಲ್, ಮಂಜುನಾಥ್ ಹಾಗೂ ವಿಶ್ವಾಸ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.