Publish Date: Wed, 07 Jul 2021 (09:40 IST)
Updated Date: Wed, 07 Jul 2021 (09:38 IST)
ನವದೆಹಲಿ: ಇಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಂಪುಟ ಪುನರಾಚನೆ ನಡೆಯಲಿದ್ದು, ಸಂಜೆ 5.30 ಕ್ಕೆ ಹೊಸ ಸಚಿವರು ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.
ಸುರೇಶ್ ಅಂಗಡಿ, ಕರ್ನಾಟಕಕ್ಕೆ ಗವರ್ನರ್ ಆಗಿ ನೇಮಕಗೊಂಡ ತಾವರ್ ಚಂದ್ ಗೆಹ್ಲೋಟ್ ಸ್ಥಾನ ಸೇರಿದಂತೆ 28 ಸಚಿವ ಸ್ಥಾನಗಳು ಖಾಲಿಯಿವೆ. ಈಗ ಈ ಸ್ಥಾನಗಳಿಗೆ 20 ಕ್ಕೂ ಹೆಚ್ಚು ಸಂಸದರಿಗೆ ಮಂತ್ರಿಗಿರಿ ಸಿಗಲಿದೆ.
ಈ ಪೈಕಿ ರಾಜ್ಯದ ಸಂಸದರಲ್ಲೂ ನಿರೀಕ್ಷೆಯಿದೆ. ಈಗಾಗಲೇ ಸಂಸದ ಉಮೇಶ್ ಜಾದವ್, ಎ. ನಾರಾಯಣಸ್ವಾಮಿ, ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ, ಶಿವಕುಮಾರ್ ಉದಾಸಿ, ಪಿಸಿ ಮೋಹನ್ ಹೆಸರುಗಳು ಚಾಲ್ತಿಯಲ್ಲಿವೆ. ಈ ಪೈಕಿ ಯಾರಿಗೆ ಮಂತ್ರಿಗಿರಿ ಸಿಗಲಿದೆ ಎಂದು ಕಾದು ನೋಡಬೇಕಿದೆ. ಇಂದು ಸಂಜೆ 5.30 ರಿಂದ 6 ಗಂಟೆಯ ಅವಧಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.