Publish Date: Fri, 02 Jul 2021 (10:44 IST)
Updated Date: Fri, 02 Jul 2021 (10:19 IST)
ನವದೆಹಲಿ: ಇತ್ತೀಚೆಗೆ ಜಮ್ಮು ಕಾಶ‍್ಮೀರದ ವಾಯುನೆಲೆಗಳ ಮೇಲೆ ಉಗ್ರರು ಡ್ರೋನ್ ಮೂಲಕ ದಾಳಿ ನಡೆಸುತ್ತಿರುವುದರ ಬಗ್ಗೆ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರಾವಣೆ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸುಲಭವಾಗಿ ಡ್ರೋನ್ ಖರೀದಿಗೆ ಲಭ್ಯವಾಗಿರುವುದೇ ಈ ಸ್ಥಿತಿಗೆ ಕಾರಣ ಎಂದು ಅವರು ಹೇಳಿದ್ದಾರೆ.
ಸದ್ಯಕ್ಕೆ ನಾವು ಡ್ರೋನ್ ಗಳನ್ನು ಜ್ಯಾಮ್ ಮಾಡುವ ಮೂಲಕ ಪ್ರತಿರೋಧ ನೀಡುತ್ತಿದ್ದೇವೆ. ಆದರೆ ಸುಲಭವಾಗಿ ಡ್ರೋನ್ ಗಳು ಲಭ್ಯವಾಗಿರುವುದು ನಮಗೆ ಸವಾಲಾಗಿದೆ. ಹಾಗಿದ್ದರೂ ಇತ್ತೀಚೆಗಿನ ದಿನಗಳಲ್ಲಿ ಗಡಿ ಭಾಗದಲ್ಲಿ ಉಗ್ರ ಚಟುವಟಿಕೆಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದು, ದಾಳಿಗಳೂ ಕಡಿಮೆಯಾಗಿದೆ ಎಂದು ಜನರಲ್ ನರಾವಣೆ ಹೇಳಿದ್ದಾರೆ.