Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಜಮ್ಮು&ಕಾಶ್ಮೀರ: ಮತ್ತೆ ಗಡಿಯಲ್ಲಿ ಡ್ರೋನ್ ಕಾಣಿಸಿಕೊಂಡಿದೆ. ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಡ್ರೋನ್ ಪತ್ತೆಯಾಗಿದ್ದು ಬಿಎಸ್ಎಫ್ ಯೋಧರು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂತಾರಾಷ್ಟ್ರೀಯ ಗಡಿರೇಖೆಗೆ ಸಮೀಪ ಪಾಕ್ ಪ್ರದೇಶದಲ್ಲಿ ಡ್ರೋನ್ ಹಾರಾಟ ನಡೆಸುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಭಾರತೀಯ ಗಡಿ ಭದ್ರತಾ ಪಡೆಗಳು ಆರು ಸುತ್ತಿನ ಗುಂಡು ಹಾರಿಸಿ ಹೊಡೆದುರುಳಿಸಲು ಯತ್ನಿಸಿದ್ದಾರೆ. ಆದರೆ ಸಾಧ‍್ಯವಾಗಿಲ್ಲ. ಭಾರತೀಯ ಯೋಧರು ಪ್ರತಿರೋಧ ತೋರುತ್ತಿದ್ದಂತೇ ಡ್ರೋನ್ ಹಿಂದಿರುಗಿದೆ.
ಬೆಳಗ್ಗಿನ ಜಾವ 4.30 ರ ವೇಳೆಗೆ ಡ್ರೋನ್ ಪತ್ತೆಯಾಗಿದೆ. ಭಾನುವಾರದಿಂದ ಈಚೆಗೆ ಇದುವರೆಗಾಗಿ ಒಟ್ಟು ಐದು ಡ್ರೋನ್ ಗಳು ಗಡಿ ಭಾಗದಲ್ಲಿ ಹಾರಾಟ ನಡೆಸಿವೆ.