Publish Date: Sun, 04 Jul 2021 (09:50 IST)
Updated Date: Sun, 04 Jul 2021 (09:52 IST)
ಜಮ್ಮು&ಕಾಶ್ಮೀರ: ಜಮ್ಮು ಕಾಶ್ಮೀರ ಗಡಿ ಭಾಗದಲ್ಲಿ ಮತ್ತೆ ಹಾರಾಡುವ ವಸ್ತು ಪತ್ತೆಯಾಗಿದ್ದು, ಸೇನೆ ತೀವ್ರ ಹುಡುಕಾಟ ನಡೆಸಿದೆ.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಡ್ರೋನ್ ದಾಳಿಯಾಗುತ್ತಿದ್ದು, ಗಡಿ ಭದ್ರತಾ ಪಡೆಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ. ನಿನ್ನೆ ರಾತ್ರಿ ಮತ್ತೆ ಹಾರಾಡುವ ವಸ್ತುವೊಂದನ್ನು ಪತ್ತೆಯಾಗಿದೆ. ಹೀಗಾಗಿ ಸೇನೆ ತೀವ್ರ ಹುಡುಕಾಟ ನಡೆಸಿದೆ. ಆದರೆ ಏನೂ ಪತ್ತೆಯಾಗಿಲ್ಲ ಎನ್ನಲಾಗಿದೆ.
ಡ್ರೋನ್ ದಾಳಿಯ ಹಿಂದೆ ಪಾಕ್ ಪ್ರೇರಿತ ಉಗ್ರರ ಕೈವಾಡವಿದೆ ಎನ್ನಲಾಗಿದೆ. ಪದೇ ಪದೇ ಡ್ರೋನ್ ದಾಳಿಯಾಗುತ್ತಿರುವ ಹಿನ್ನಲೆಯಲ್ಲಿ ವಾಯುನೆಲೆಗಳಲ್ಲಿ ಆಂಟಿ-ಡ್ರೋನ್ ಸಿಸ್ಟಮ್ ಅಳವಡಿಸಲಾಗಿದೆ.