Publish Date: Mon, 22 Mar 2021 (07:01 IST)
Updated Date: Mon, 22 Mar 2021 (07:04 IST)
ಮೀರತ್ : ಹುಡುಗಿ ಸ್ನಾನ ಮಾಡುತ್ತಿದ್ದಾಗ ನೆರೆಮನೆಯಾತ ಹುಡುಗಿಯ ಅಶ್ಲೀಲ ವಿಡಿಯೋವನ್ನು ರೆಕಾರ್ಡ್ ಮಾಡಿದ ಘಟನೆ ಮೀರತ್ ನ ಮಾವಾನಾ ಪ್ರದೇಶದಲ್ಲಿ ನಡೆದಿದೆ.
ಸಂತ್ರಸ್ತೆಯ ಪೋಷಕರು ಮೈದಾನಕ್ಕೆ ತೆರಳಿದ್ದ ವೇಳೆ ಆಕೆ ಸ್ನಾನ ಮಾಡಲು ಹೋಗಿದ್ದಾಳೆ. ಆ ವೇಳೆ ಆತ ಇಂತಹ ಕೃತ್ಯ ಎಸಗಿದ್ದಾನೆ. ಇದನ್ನು ನೋಡಿದ ಹುಡುಗಿ ತನ್ನ ಸಹೋದರನಿಗೆ ತಿಳಿಸಿದ್ದಾಳೆ.
ಆತ ಆರೋಪಿಯ ಜೊತೆ ಜಗಳಕ್ಕಿಳಿದಿದ್ದು, ಆತನ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಆತ ಮೊಬೈಲ್ ನ್ನು ಹಾನಿಗೊಳಿಸಿದ್ದಾನೆ ಎನ್ನಲಾಗಿದೆ.ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.