Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮೀರತ್ : ಹಣಕ್ಕಾಗಿ ತಂದೆಯನ್ನು ಮಗ ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಮೀರತ್ ನ ಬ್ರಹ್ಮಗಿರಿ ಪ್ರದೇಶದಲ್ಲಿ ನಡೆದಿದೆ.
ಮದ್ಯ ಸೇವನೆ ಮಾಡುತ್ತಿದ್ದ ಮಗ ತಂದೆಯ ಬಳಿ ಖರ್ಚಿಗೆ ಹಣ ಕೇಳಿದ್ದಾನೆ. ತಂದೆ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಜಗಳ ನಡೆದಿದೆ, ಮಗ ಪಿಸ್ತೂಲ್ ನಿಂದ ತಂದೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.
ಬಳಿಕ ಮಾಹಿತಿ ತಿಳಿದ ಪೊಲೀಸರು ಮನೆಗೆ ಬಂದಾಗ ಅವರ ಮೇಲೂ ಗುಂಡಿನ ಸುರಿಮಳೆ ಸುರಿಸಿದ್ದಾನೆ. ಅದರಿಂದ ತಪ್ಪಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.