Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮೀರತ್ : ಹುಡುಗಿಯನ್ನು ಮನೆಯಿಂದ ಅಪಹರಿಸಿ ಬಳಿಕ ಸಾಮೂಹಿಕ ಮಾನಭಂಗ ಎಸಗಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ನಾಲ್ಕು ಮಂದಿ ಪುರುಷರು ಮನೆಯೊಳಗೆ ನುಗ್ಗಿ 14 ವರ್ಷದ ಹುಡುಗಿಯನ್ನು ಬಲವಂತವಾಗಿ ಕಾಡಿನೊಳಗೆ ಕರೆದೊಯ್ದು ಸಾಮೂಹಿಕ ಮಾನಭಂಗ ಎಸಗಿದ್ದಾರೆ. ಬಳಿಕ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಸಂತ್ರಸ್ತೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಬಳಿಕ ಅವಳನ್ನು ರಕ್ಷಿಸಲಾಗಿದೆ.
ಈ ಬಗ್ಗೆ ಸಂತ್ರಸ್ತೆಯ ತಂದೆ ದೂರು ದಾಖಲಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.