ಬೆಂಗಳೂರು : ಎಸೆನ್ಷಿಯಲ್ ಆಯಿಲ್ ಗಳು ಚರ್ಮದ ಆರೋಗ್ಯಕ್ಕೆ ತುಂಬಾ ಉತ್ತಮ. ಇವುಗಳಿಂದ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗಾಗಿ ಚರ್ಮ ಬೆಳ್ಳಗಾಗಿ ಹೊಳೆಯುತ್ತೀರಬೇಕೆಂಬ ಆಸೆ ಇರುವವರು ನೀರಿಗೆ ಈ ಎಸೆನ್ಷಿಯಲ್ ಆಯಿಲ್ ಅನ್ನು ಮಿಕ್ಸ್ ಮಾಡಿ ಸ್ನಾನ ಮಾಡಿ.
ನಿಂಬೆ ಎಸೆನ್ಷಿಯಲ್ ಆಯಿಲ್ ಇದು ಚರ್ಮವನ್ನು ಟೋನ್ ಮಾಡುತ್ತದೆ. ಸುಕ್ಕುಗಳನ್ನು ನಿವಾರಿಸುತ್ತದೆ. ಇದು ಬ್ಯಾಕ್ಟೀರಿಯಾವನ್ನು ನಿವಾರಿಸಿ ತ್ವಚೆಯನ್ನು ಕಾಪಾಡುತ್ತದೆ. ಅಷ್ಟೇ ಅಲ್ಲದೇ ತಲೆಯ ಹೊಟ್ಟಿನ ಸಮಸ್ಯೆಯನ್ನು ನಿವಾರಿಸಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.
ಹಾಗಾಗಿ ನೀರಿಗೆ 5 ಹನಿ ನಿಂಬೆ ಎಸೆನ್ಷಿಯಲ್ ಆಯಿಲ್, 1 ಚಮಚ ತೆಂಗಿನೆಣ್ಣೆ ಸೇರಿಸಿ ಮಿಕ್ಸ್ ಮಾಡಿ ಸ್ನಾನ ಮಾಡಿ.
l