Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚೆನ್ನೈ : ಹೊಸದಾಗಿ ಜೀವನ ನಡೆಸಬೇಕಾಗಿದ್ದ ನವಜೋಡಿಯನ್ನು ನವವಧು ಸಹೋದರ ಮತ್ತು ಪೋಷಕರು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕುಂಭಕೋಣಂನಲ್ಲಿ ನಡೆದಿದೆ.
ಬೇರೆ ಜಾತಿ ಯುವಕನನ್ನು ಪ್ರೀತಿಸಿ ಓಡಿ ಹೋಗಿ ಯುವತಿ ಮದುವೆಯಾಗಿದ್ದಳು. ಈ ಹಿನ್ನೆಲೆ ಮದುವೆ ಒಪ್ಪದ ನವವಧು ಪೋಷಕರು ನವವಿವಾಹಿತರನ್ನು ಮನೆಗೆ ಕರೆಸಿ ಹತ್ಯೆ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನವವಧುವಿನ ಸಹೋದರ ಮತ್ತು ಪೋಷಕರನ್ನು ಪೊಲೀಸರು ಬಂಧಿಸಿದರು.
ಈ ಹಿನ್ನೆಲೆ ನವವಧು ಮನೆಯವರು ಅವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ವಧು ಸಹೋದರ ಎಲ್ಲವನ್ನು ಮರೆತಿರುವಂತೆ ನಟಿಸಿ ನವಜೋಡಿಯನ್ನು ಮನೆಗೆ ಆಹ್ವಾನಿಸಿದ್ದಾರೆ.
ಅವರನ್ನು ನಂಬಿ ನವಜೋಡಿ ಮನೆಗೆ ಹೋಗಿದ್ದಾರೆ. ಸಮಯ ನೋಡಿಕೊಂಡು ಇಬ್ಬರನ್ನು ಸಹೋದರ ಮತ್ತು ಪೋಷಕರು ಸೇರಿ ಹತ್ಯೆ ಮಾಡಿದ್ದಾರೆ ಎಂದು ವಿವರಿಸಿದರು.