Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಲಕ್ನೋ: ಇಬ್ಬರು ಗಂಡು ಮಕ್ಕಳು ಆಸ್ತಿ, ಹಣಕ್ಕಾಗಿ ತಮ್ಮ ತಂದೆಯನ್ನೇ ಕೊಂದು ತಾಯಿ ಬಳಿ ಅಮಾಯಕರಂತೆ ನಾಟಕವಾಡಿದ್ದಾರೆ. ಇದೀಗ ಇಬ್ಬರೂ ಮಕ್ಕಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಮದ್ಯದ ಅಮಲಿನಲ್ಲಿ ತಂದೆಯ ಜೊತೆ ಇಬ್ಬರು ಮಕ್ಕಳು ಆಸ್ತಿ ಮತ್ತು ಹಣಕ್ಕಾಗಿ ಜಗಳವಾಡಿದ್ದರು. ಬಳಿಕ ತಂದೆಯನ್ನು ಕೊಂದು ಶವವನ್ನು ಹೂತು ಹಾಕಿದ್ದರು.
ತಾಯಿ ಕೇಳಿದಾಗ ತಂದೆಯನ್ನು ಇನ್ನೊಂದು ಗ್ರಾಮಕ್ಕೆ ಬಿಟ್ಟು ಬಂದಿದ್ದೇವೆ. ಬರುವಾಗ ಅವರೇ ಬರುತ್ತಾರೆ ಎಂದು ನಾಟಕವಾಡಿದ್ದರು. ಆದರೆ ಎಷ್ಟು ಹೊತ್ತಾದರೂ ಗಂಡ ಮನೆಗೆ ಮರಳದೇ ಇದ್ದಾಗ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಇಬ್ಬರು ಮಕ್ಕಳ ಮೇಲೆ ಸಂಶಯಗೊಂಡು ವಿಚಾರಣೆ ನಡೆಸಿದಾಗ ನಿಜಾಂಶ ಬಯಲಾಗಿದೆ.