Publish Date: Tue, 14 Jun 2022 (10:14 IST)
Updated Date: Tue, 14 Jun 2022 (10:02 IST)
ಮುಂಬೈ : ಡಾಲರ್ ಮುಂದೆ ರೂಪಾಯಿ ಮೌಲ್ಯ ಮತ್ತೆ ಸಾರ್ವಕಾಲಿಕವಾಗಿ ಕುಸಿತ ಕಂಡಿದೆ.
ಇಂದು 36 ಪೈಸೆ ಇಳಿಕೆ ಕಂಡಿದ್ದು ಒಂದು ಡಾಲರ್ ಮುಂದೆ ರೂಪಾಯಿ ಮೌಲ್ಯ 78.29ಗೆ ವಿನಿಮಯವಾಗಿದೆ.
ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ವಿದೇಶಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿ ಬಂಡವಾಳವನ್ನು ಹಿಂದಕ್ಕೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತಕಂಡಿದೆ.
ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್ಗೆ 120.23 ಡಾಲರ್ (9,338 ರೂಪಾಯಿ) ಗಳಷ್ಟಾಗಿದ್ದು, ಶೇ.14ರಷ್ಟು ಏರಿಕೆಯಾಗಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ.
ಕಳೆದ ಶುಕ್ರವಾರ 19 ಪೈಸೆ ಇಳಿಕೆಯಾಗಿ 1 ಡಾಲರ್ ಬೆಲೆ 77.93 ರೂ. ಗಳಾಗಿತ್ತು. ಆದರೆ ಏಷ್ಯಾ ಹಾಗೂ ಯುರೋಪಿಯನ್ ಕರೆನ್ಸಿಯ ಮೌಲ್ಯ ಕುಸಿತವಾಗಿದ್ದರಿಂದ 77.70 ರೂ.ದಾಟಿಲ್ಲ. ಆದ್ದರಿಂದ ರೂಪಾಯಿ ಮೌಲ್ಯ 78 ರೂಪಾಯಿಗಿಂತಲೂ ಕಡಿಮೆಯಾಗಲು ಅವಕಾಶ ಮಾಡಿಕೊಟ್ಟಿದೆ.
ಕಳೆದ ತಿಂಗಳು ರೂಪಾಯಿ ಮೌಲ್ಯ 51 ಪೈಸೆಯಷ್ಟು ಸಾರ್ವಕಾಲಿಕ ಕುಸಿತ ಕಂಡಿತ್ತು. ಅಲ್ಲದೆ ನಾಲ್ಕು ದಿನಗಳ ಹಿಂದೆಯೂ 13 ಪೈಸೆ ಇಳಿಕೆಯಾಗಿ 77.81ಕ್ಕೆ ತಲುಪಿತ್ತು. ಇದೀಗ ಮತ್ತೆ ಕುಸಿತವಾಗಿದೆ.
Ramya kosira
Publish Date: Tue, 14 Jun 2022 (10:14 IST)
Updated Date: Tue, 14 Jun 2022 (10:02 IST)