ನವದೆಹಲಿ: ಹೊಸದಾಗಿ ಪುನರಾಚನೆಯಾದ ಮೋದಿ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯಗಳಿಗೆ ಕೊರೋನಾ ವಿರುದ್ಧ ಹೋರಾಟಕ್ಕೆ ಬಂಪರ್ ಪ್ಯಾಕೇಜ್ ಸಿಕ್ಕಿದೆ.
ಕೊರೋನಾ ವಿರುದ್ಧದ ಹೋರಾಟಕ್ಕೆ ಕೇಂದ್ರದಿಂದ ಬರೋಬ್ಬರಿ 23,123 ಕೋಟಿ ರೂ. ಅನುದಾನ ಸಿಕ್ಕಿದೆ. ಹೊಸ ಸಂಪುಟದ ಮೊದಲ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ.
ಕೊರೋನಾ ಮಾತ್ರವಲ್ಲದೆ, ಕೃಷಿ, ಆರೋಗ್ಯ ಕ್ಷೇತ್ರದ ಸುಧಾರಣೆಗೆ ತುರ್ತು ಪ್ಯಾಕೇಜ್ ಬಳಸಿಕೊಳ್ಳಲಾಗುತ್ತದೆ. ಈ ಪ್ಯಾಕೇಜ್ ಬಳಸಿಕೊಂಡು ಮೂರನೇ ಕೊರೋನಾ ಅಲೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಆರೋಗ್ಯ ಸಚಿವ ಮನಸುಖ ಮಾಂಡವಿಯ ಹೇಳಿದ್ದಾರೆ.