ನವದೆಹಲಿ: ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸಂಸದ ಅನುರಾಗ್ ಠಾಕೂರ್ ಈಗ ಕ್ರೀಡಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಸುಪ್ರೀಂಕೋರ್ಟ್ ಬಿಸಿಸಿಐ ಆಡಳಿತದಲ್ಲಿ ಬದಲಾವಣೆ ತಂದ ಮೇಲೆ ಅನುರಾಗ್ ಠಾಕೂರ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡಿದ್ದರು. ಆದರೆ ಅದಕ್ಕೆ ಮೊದಲು ಬಿಸಿಸಿಐನಲ್ಲಿ ಗಮನಾರ್ಹ ಕೆಲಸ ಮಾಡಿದ್ದರು.
ಇದಾದ ಬಳಿಕ ಅನುರಾಗ್ ಠಾಕೂರ್ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಸಹಾಯಕ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈಗ ಕ್ರೀಡಾ ಲೋಕದಲ್ಲಿ ಅನುಭವ ಹೊಂದಿರುವ ಅನುರಾಗ್ ಠಾಕೂರ್ ಗೆ ಸಂಪುಟದಲ್ಲಿ ಬಡ್ತಿ ನೀಡಲಾಗಿದ್ದು, ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಸಚಿವರನ್ನಾಗಿ ನೇಮಕ ಮಾಡಲಾಗಿದೆ.