Publish Date: Wednesday, 07 July 2021 (16:15 IST)
Updated Date: Wednesday, 07 July 2021 (16:19 IST)
ಕೇಂದ್ರ ಆರೋಗ್ಯ ಸಚಿವ ಸ್ಥಾನಕ್ಕೆ ಹರ್ಷವರ್ಧನ್ ರಾಜೀನಾಮೆ ಸಲ್ಲಿಸುವ ಮೂಲಕ ಒಟ್ಟಾರೆ ರಾಜೀನಾಮೆ ಸಂಖ್ಯೆ 11ಕ್ಕೇರಿದೆ.
ಕೇಂದ್ರ ಸಚಿವ ಸಂಪುಟ ಪುನರಚನೆ ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿದ್ದು, ಹೊಸಬರು, ಹಳಬರು ಸೇರಿದಂತೆ 43 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ 11 ಮಹಿಳೆಯರಿಗೆ ಸ್ಥಾನ ನಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹರ್ಷವರ್ಧನ್, ರಮೇಶ್ ಪೋಖ್ರಿಯಾಲ್, ಸಂತೊಷ್ ಗಂಗ್ವಾರ್, ಸಂಜಯ್ ದೊಟ್ರೆ, ರಾವ್ ಸಾಹೆಬ್, ಧನ್ವೆ ಪಾಟೀಲ್, ಅಶ್ವಿನ್ ಚೌಬೆ, ದೇಬಶ್ರಿ ಚೌಧರಿ, ರತನ್ ಲಾಲ್ ಕಟಾರಿಯ. ಸದಾನಂದ ಗೌಡ, ತಾವರ್ ಚಂದ್ ಗೆಹ್ಲೋಟ್ ಈಗಾಗಲೇ ರಾಜೀನಾಮೆ ನೀಡಿದ್ದಾರೆ.